ಹುಬ್ಬಳ್ಳಿ: ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಹಿಡಿಯುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಘಟಗಿಯ ಬಸವೇಶ್ವರನಗರದ ನಿವಾಸಿ ಜೈಲಾನಿ ಬಾಷಾಸಾಬ ಗಂಜಿಗಟ್ಟಿ ಬಂಧಿತ ಕಳ್ಳ.
ಇನ್ನು ಆರೋಪಿಯಿಂದ 9 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಹುಬ್ಬಳ್ಳಿಯಲ್ಲಿನ ಏಳು ಬೈಕ್ ಹಾಗೂ ಕಲಘಟಗಿ 2 ಬೈಕುಗಳನ್ನ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.
ಇನ್ಸ್ ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ಎಎಸ್ ಐ ಕೆ.ಎಂ.ಮಠಪತಿ, ಸಿಬ್ಬಂದಿ ಎಸ್.ಡಿ.ಮಲ್ಲನಗೌಡರ, ಎನ್.ಎಂ.ಹೊನ್ನಪ್ಪನವರ, ಎಂ.ಎಲ್.ಪಾಶ್ಚಾಪುರ, ಚೆನ್ನಪ್ಪ ಬಳ್ಳೋಳ್ಳಿ, ಎನ್.ಎಂ.ಸಂಶಿ, ಎನ್.ಪಿ.ಮೇಟಿ, ಎನ್.ಬಿ.ಬೋಗೂರ, ಶಿವಾನಂದ ಕಾಂಬಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
05/12/2020 08:03 am