ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಇನ್ನೂ ಐದು ದಿನಗಳ ಕಾಲ ಜೈಲೂಟವನ್ನೇ ಮಾಡುವಂತಾಗಿದೆ.
ವಿನಯ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಡಿ.9 ಕ್ಕೆ ಮುಂದೂಡಿದೆ.
ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಅವರ ನ್ಯಾಯಾಂಗ ಬಂಧನದ ಅವಧಿ ಡಿ.7ರಂದು ಮುಕ್ತಾಯಗೊಳ್ಳಲಿದೆ.
ವಿನಯ್ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿ ಪ್ರತಿಯಾಗಿ ಸಿಬಿಐ ಕೂಡ ತಕರಾರು ಅರ್ಜಿ ಸಲ್ಲಿಸಿದೆ.
Kshetra Samachara
04/12/2020 05:29 pm