ಹುಬ್ಬಳ್ಳಿ: ಜೂಜಾಟ ಆಡುತ್ತಿದ್ದ ಒಂಬತ್ತು ಮಂದಿ ಜೂಜುಕೋರರನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಅಂಚಟಗೇರಿ– ಚನ್ನಾಪುರ ರಸ್ತೆ ಪಕ್ಕದ ನೀಲಗಿರಿ ತೋಪಿನಲ್ಲಿ ನಡೆದಿದೆ.
ಬಸವರಾಜ ಗುಂಜಳ್ಳಿ, ಮಂಜುನಾಥ ಹಿರೇಮಠ, ಯೇಸುದಾಸ ವಳಗುಂದಿ, ಅರ್ಜುನ ಖಾಲಿಗಾಡಿ, ಉಮೇಶ ಧರಣಿ, ವಿಶಾಲ ಹನುಮಸಾಗರ, ಕೃಷ್ಣಾ ದಲಭಂಜನ, ಚಂದನ ನಾಯಕ, ನೀಲಪ್ಪ ಭಗವತಿ ಬಂಧಿತ ಆರೋಪಿಗಳು. ಅವರಿಂದ 60 ಸಾವಿರ ನಗದು, ಐದು ಬೈಕ್‌ಗಳು ಹಾಗೂ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇವರೆಲ್ಲ ಹಳೇಹುಬ್ಬಳ್ಳಿ, ಆನಂದ ನಗರ ಹಾಗೂ ಹೆಗ್ಗೇರಿ ಭಾಗದ ನಿವಾಸಿಗಳು ಎಂದು ತಿಳಿದು ಬಂದಿದೆ.
Kshetra Samachara
24/11/2020 09:06 am