ಹುಬ್ಬಳ್ಳಿ: ರೈತ ಸಮುದಾಯಕ್ಕೆ ಪೂರಕವಾಗುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಆದರೆ ಈ ಕೃಷಿ ಉತ್ಪನ್ನ ಮಾರುಕಟ್ಟೆಯು ಒಂದಿಲ್ಲೊಂದು ಆರೋಪ, ದೂರುಗಳಿಂದ ಸುದ್ದಿಯಾಗುತ್ತಲೇ ಇದೆ. ಈಗ ಮತ್ತೊಂದು ಆರೋಪವನ್ನು ಆಡಳಿತ ಮಂಡಳಿ ಸುತ್ತು ಹಾಕಿಕೊಂಡಿದ್ದು, ಏನಿದು ಆರೋಪ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಹೌದು. ಕೃಷಿ ಉತ್ಪನ್ನ ಮಾರುಕಟ್ಟೆಯು ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದೆ. ಆಸ್ತಿ ಹಂಚಿಕೆ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಯಾವುದೇ ಠರಾವುಗಳನ್ನು ನಿಯಮಮಿತವಾಗಿ ಪಾಸ್ ಮಾಡಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಇಲ್ಲಿನ ವ್ಯವಸ್ಥೆಗೆ ಭ್ರಷ್ಟಾಚಾರ ಹಾಗೂ ಹಗರಣದ ವಾಸನೆ ಹೊರ ಬರುತ್ತಿದೆ ಎಂಬ ಆರೋಪದ ಮಾತು ಕೇಳಿ ಬರುತ್ತಿದೆ.
ಬೈಟ್: ಶಂಕ್ರಪ್ಪ ಬಿಜವಾಡ
ಇನ್ನೂ ಹುಬ್ಬಳ್ಳಿ ತಾಲೂಕು ಎಪಿಎಂಸಿ ಸಮಿತಿಯಲ್ಲಿ ಭ್ರಷ್ಟಾಚಾರ ಹಗರಣದ ಸರಮಾಲೆಯೇ ಗೋಚರಿಸುತ್ತಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮದ ವಿರುದ್ಧ ಬಹುಮತದಿಂದ ಠರಾವುಗಳನ್ನು ಪಾಸ್ ಮಾಡಿದೆ. ಅಲ್ಲದೇ ಚನ್ನು ಹೊಸಮನಿ ಎಂಬುವರು ತಮಗೆ ಬೇಕಾದ ಠರಾವು ಪ್ರತಿಯನ್ನು ಮಾತ್ರ ಸಭೆ ಆದ ಮರುದಿನವೇ ಅಧ್ಯಕ್ಷರು ವರ್ತಕರ ಪ್ರತಿನಿಧಿ ಹಾಗೂ ಕಾರ್ಯದರ್ಶಿಯವರು ಕೃಷಿ ಮಾರಾಟ ಇಲಾಖೆ ಬೆಂಗಳೂರಿಗೆ ಹೋಗಿ ನಿರ್ದೇಶಕರ ಅನುಮತಿ ಪಡೆದುಕೊಂಡು ಬಂದು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಲ್ಲದೇ ಆಸ್ತಿ ಹಂಚಿಕೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಬೈಟ್: ಶಂಕ್ರಪ್ಪ ಬಿಜವಾಡ
ಒಟ್ಟಿನಲ್ಲಿ ಎಪಿಎಂಸಿಯಲ್ಲಿ ಇಂತಹದೊಂದು ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಕೃಷಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕಬೇಕಿದೆ.
Kshetra Samachara
23/02/2022 09:21 am