ಧಾರವಾಡ: ಧಾರವಾಡ ನಗರದ ಹಲವೆಡೆಗಳಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬೇಧಿಸಿದ್ದಾರೆ.
ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಕಮನಹಳ್ಳಿ, ಅರವಿಂದನಗರ, ವೈ.ಎಸ್.ಕಾಲೊನಿ ಸೇರಿದಂತೆ ಅನೇಕ ಕಡೆಗಳಲ್ಲಿ ಬೈಕ್ ಕಳ್ಳತನವಾಗಿದ್ದರ ಬಗ್ಗೆ ದೂರುಗಳು ದಾಖಲಾಗಿದ್ದವು. ಈ ಪ್ರಕರಣ ಬೆನ್ನು ಹತ್ತಿದ ಪೊಲೀಸರು ರಾಜೀವಗಾಂಧಿನಗರದ ಅಭಿಷೇಕ ಸಂಗ್ತಾಳೆ ಹಾಗೂ ಈರನಗೌಡ ಕೋಣಿ ಎಂಬಾತರನ್ನು ಬಂಧಿಸಿ 8 ಲಕ್ಷ ರೂಪಾಯಿ ಮೌಲ್ಯದ ಹೀರೋ ಹೋಂಡಾ ಕಂಪೆನಿಯ 17 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
23/10/2020 07:42 pm