ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಲಬಾಧೆಗೆ ಬಳಲಿ ನೇಣಿಗೆ ಶರಣಾದ ರೈತ

ಕುಂದಗೋಳ : ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರೊಟ್ಟಿಗವಾಡ ಗ್ರಾಮದಲ್ಲಿ ಇಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತ ಯಲ್ಲಪ್ಪಗೌಡ ದ್ಯಾವನಗೌಡ ಮರಿಗೌಡ್ರ (35) ಎಂದು ತಿಳಿದು ಬಂದಿದೆ. ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಇವರು ಹೊಲಕ್ಕೆ ಕೃಷಿ ಚಟುವಟಿಕೆ ಕೈಗೊಳ್ಳಲು ಕಳೆದ ಮೂರ್ನಾಲ್ಕು ವರ್ಷದಿಂದ ಬೀಜ ಗೊಬ್ಬರ ಕ್ರಿಮಿನಾಶಕ ಹಾಗೂ ಮನೆ ಖರ್ಚಿಗಾಗಿ ರೊಟ್ಟಿಗವಾಡ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1.10.000 ರೂಪಾಯಿ ಸಾಲ ಮಾಡಿಕೊಂಡಿದ್ದರು. ಹಾಗೂ ಕೆ.ವ್ಹಿ.ಜಿ ಬ್ಯಾಂಕ್ ಯರಗುಪ್ಪಿಯಲ್ಲಿ 1.50.000 ಸಾಲ ಮಾಡಿಕೊಂಡಿದ್ದರು. ಅತಿವೃಷ್ಟಿ ಪರಿಣಾಮ ಸತತ ಎರಡು ವರ್ಷಗಳಿಂದ ಬೆಳೆದ ಫಸಲು ಕೈಗೆ ಸಿಗದೇ ಜೀವನ ನಿರ್ವಹಣೆ ಹಾಗೂ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಬುಧವಾರ ತಮ್ಮ ವಾಸದ ಮನೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

22/10/2020 05:19 pm

Cinque Terre

20.1 K

Cinque Terre

1

ಸಂಬಂಧಿತ ಸುದ್ದಿ