ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಡ್ಡೀಸ್ ಚಿತ್ರ ಜೂನ್ 24ಕ್ಕೆ ಬಿಡುಗಡೆ: ಪಬ್ಲಿಕ್ ನೆಕ್ಸ್ಟ್ ಜೊತೆ ನಟ, ನಿರ್ಮಾಪಕರ ಮಾತು

ಹುಬ್ಬಳ್ಳಿ: ಸ್ನೇಹದ ಕಥಾಹಂದರ ಹೊಂದಿರುವ ಬಡ್ಡೀಸ್ ಚಲನಚಿತ್ರವನ್ನು ಜೂನ್ 24 ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕಿ ಭಾರತಿ ಶೆಟ್ಟಿ ಹಾಗೂ ಚಿತ್ರ ನಟ ಕಿರಣರಾಜ ಹೇಳಿದರು.

ನಗರದಲ್ಲಿಂದು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆಯುವ ಕಥೆ ಹೊಂದಿರುವ ಬಡ್ಡೀಸ್ ಚಿತ್ರ ಸ್ನೇಹದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಚಿತ್ರದಲ್ಲಿ ನಾಯಕ ನಟನಾಗಿ ಕಿರಣರಾಜ್, ನಾಯಕ ನಟಿಯಾಗಿ ಸಿರಿ ಪ್ರಹ್ಲಾದ್ ಅಭಿನಯ ಮಾಡಿದ್ದಾರೆ. ಇದಲ್ಲದೇ ಗೋಪಾಲ್ ದೇಶಪಾಂಡೆ, ಅರವಿಂದ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ ಎಂದರು.

ಚಿತ್ರವನ್ನು ಮಂಗಳೂರು, ತುಮಕೂರು, ಗೋವಾ ಸೇರಿದಂತೆ ಮುಂತಾದ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಡ್ಡೀಸ್ ಚಿತ್ರದಲ್ಲಿ ಎರಡು ಹಾಡುಗಳಿವೆ. ಒಂದು ಹಾಡನ್ನು ಲೈವ್ ಲೋಕೆಶನ್‌ನಲ್ಲಿ ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದರು.

Edited By : Somashekar
Kshetra Samachara

Kshetra Samachara

16/06/2022 06:38 pm

Cinque Terre

23.93 K

Cinque Terre

1

ಸಂಬಂಧಿತ ಸುದ್ದಿ