ಹುಬ್ಬಳ್ಳಿ: ಪುನೀತ್‌ರಾಜಕುಮಾರ ಅವರ ಹುಟ್ಟು ಹಬ್ಬವನ್ನು ವಾಣಿಜ್ಯ ನಗರಿಯಲ್ಲಿ ಬಹಳ ಸಡಗರದಿಂದ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಗರದ ಉಣಕಲ್ ಬಳಿ ಇರುವ ಸಿದ್ದೇಶ್ವರ ಆಶ್ರಯ ಕಾಲೋನಿ ಜನರೆಲ್ಲರೂ ಸೇರಿ ಅಪ್ಪು ಅವರ ಜನ್ಮ ದಿನದ ನಿಮಿತ್ತ, ಬೃಹತ್ ಆಕಾರದ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿದ್ರು. ಅಲ್ಲದೇ ತಮ್ಮ ಕಾಲೋನಿ ನಿವಾಸಿಗಳು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ರು. ನಂತರ ಅನ್ನ ಸಂತರ್ಪಣೆ ಕೂಡ ಏರ್ಪಡಿಸಿದ್ದು ವಿಶೇಷವಾಗಿತ್ತು. ಕಾಲೋನಿಯ ಮಕ್ಕಳು, ಯುವಕರು, ವಯಸ್ಕರು, ಮತ್ತು ಮಹಿಳೆಯರು ಎಲ್ಲರೂ ಸೇರಿ ಸಂಭ್ರಮಿಸಿದ್ರು. ಹಾಗೆಯೇ ಅಪ್ಪು ಅವರನ್ನ ನೆನೆದು ಭಾವುಕರಾದರು.
Kshetra Samachara
18/03/2022 12:05 pm