ನವಲಗುಂದ: ತಾಲ್ಲೂಕಿನ ಕಾಲವಾಡ ಗ್ರಾಮದ ಗುರುಶಾಂತೇಶ್ವರ ಮಠದ ಮುಂಭಾಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಎದುರು ದೀಪ ಬೆಳಗಿ ಸಂತಾಪ ಸೂಚಿಸಲಾಯಿತು.
'ವೀರ ಕನ್ನಡಿಗ'ನ ಅಕಾಲಿಕ ಸಾವಿಗೆ ಕನ್ನಡಿಗರ ಆಕ್ರಂದನ ಈಗಾಗಲೇ ಮುಗಿಲು ಮುಟ್ಟಿದೆ. ರಾಜ್ಯಾದ್ಯಂತ ಶೋಕ ಮಾಡುಗಟ್ಟಿದೆ. ತಾಲ್ಲೂಕಿನ ಕಾಲವಾಡ ಗ್ರಾಮದಲ್ಲಿಯೂ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Kshetra Samachara
30/10/2021 07:57 am