ಧಾರವಾಡ : ಅಕ್ಟೋಬರ್ 14 ರಂದು ತೆರೆಕಾಣಲಿರುವ ಕೋಟಿಗೊಬ್ಬ 3, ಸಲಗ ಮತ್ತು ಕೃಷ್ಣ ಅಟ್ ಜಿಮೈಲ್ ಡಾಟ್ ಕಾಂ ಎಂಬ ಚಿತ್ರಗಳನ್ನ ಚಿತ್ರಮಂದಿರಗಳಿಗೆ ಬಂದು ವೀಕ್ಷಣೆ ಮಾಡುವಂತೆ ಧಾರವಾಡ ಚಲನಚಿತ್ರ ಪ್ರದರ್ಶಕರ ಸಂಘ ಮನವಿ ಮಾಡಿದರು.
ಈ ಕುರಿತು ಧಾರವಾಡ ಚಲನಚಿತ್ರ ಪ್ರದರ್ಶಕರ ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಮಹಾಮಾರಿ ಕೊರೊನದಿಂದಾಗಿ ಚಿತ್ರಮಂದಿರಗಳು ಸಂಪೂರ್ಣವಾಗಿ ಬಂದ್ ಆಗಿದ್ದವು ಇದರಿಂದಾಗಿ ಚಿತ್ರಮಂದಿರ ಮಾಲೀಕರು ಚಿತ್ರಮಂದಿರ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ ಈಗ ರಾಜ್ಯ ಸರ್ಕಾರ ಅಕ್ಟೋಬರ್ ಒಂದರಿಂದ ಪೂರ್ಣಪ್ರಮಾಣದ ಆಸನ ಭರ್ತಿಗೆ ಅವಕಾಶ ನೀಡಿ ಚಿತ್ರಮಂದಿರವನ್ನು ತೆರೆಯಲು ಅನುಮತಿಯನ್ನು ನೀಡಿದ್ದಾರೆ. ಹಾಗಾಗಿ ಸಿನಿಪ್ರಿಯರು, ಚಿತ್ರಮಂದಿರಗಳಿಗೆ ಬಂದು ತಮ್ಮ ನೆಚ್ಚಿನ ಚಿತ್ರಗಳನ್ನು ವೀಕ್ಷಣೆ ಮಾಡಬೇಕು ಎಂದು ಕೇಳಿಕೊಂಡರು.
ಕೊರೋನ ಮಹಾಮಾರಿ ಸಂದರ್ಭದಲ್ಲಿ ಲಾಕ್ದೋನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಗೆ ಸರ್ಕಾರ ಸಹಾಯ ಹಸ್ತ ಚಾಚಿತ್ತು. ಆದರೆ ಚಿತ್ರ ಮಂದಿರ ಮಾಲೀಕರಿಗೆ ಹಾಗೂ ಸಿಬ್ಬಂದಿಗಳಿಗೆ ಯಾವುದೇ ಸಹಾಯ ಮಾಡಲಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಚಿತ್ರಮಂದಿರದ ಮಾಲೀಕರು ಹಾಗೂ ಸಿಬ್ಬಂದಿಗೆ ನೆರವಿನ ಹಸ್ತ ನೀಡಬೇಕು ಎಂದು ವಿನಂತಿಸಿಕೊಂಡರು.
Kshetra Samachara
11/10/2021 04:49 pm