ಧಾರವಾಡ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹವಾ ಸ್ಯಾಂಡಲ್ ವುಡ್ ನಲ್ಲಿ ಜೋರಾಗಿ ಸಾಗಿದೆ. ನಿನ್ನೆಯಷ್ಟೇ ಬಿಡುಗಡೆ ಆಗಿರುವ ಪೊಗರು ಸಿನೆಮಾ ಎಲ್ಲ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣ್ತಾ ಇದೆ.
ನಿರ್ದೇಶಕ ನಂದಕಿಶೋರ್ ಬರೀ ರೀಮೇಕ್ ಮಾಡ್ತಾರೆ ಎಂಬ ಗುಸುಗುಸು ಇತ್ತು. ಈ ಮಾತನ್ನ ಸುಳ್ಳಾಗಿಸಿದ ಅವರು ಸಂಪೂರ್ಣ ಸ್ವಮೇಕ್ ಸಿನೆಮಾ ಮಾಡಿದ್ದಾರೆ. ಇದು ಕೇವಲ ಮಾಸ್ ಹಾಗೂ ಆ್ಯಕ್ಷನ್ ಸಿನಿಮಾ ಅಲ್ಲ. ಬದಲಾಗಿ ಕಾಮಿಡಿ ಕಂ ಸೆಂಟಿಮೆಂಟ್ ಕಥಾಹಂದರದ ಇರುವ ಸಿನಿಮಾ ಅನ್ನೋ ಅಭಿಪ್ರಾಯ ಸಿನಿರಸಿಕರಲ್ಲಿ ಕೇಳಿ ಬರ್ತಿದೆ. ಈ ಚಿತ್ರಕ್ಕಾಗಿಯೇ ಧ್ರುವ ಸರ್ಜಾ ಅವರು ವಿಶೇಷವಾಗಿ ಬಾಡಿ ವರ್ಕೌಟ್ ಮಾಡಿದ್ದಾರೆ.
ಅಂದ್ ಹಾಗೆ ಧಾರವಾಡದ ಸಂಗಮ್ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದೆ. ಈ ಬಗ್ಗೆ ಸಿನಿಮಾ ನೋಡಿ ಹೊರ ಬಂದ ಧ್ರುವ ಸರ್ಜಾ ಅಭಿಮಾನಿಗಳು ಹೇಳೋದೇನು? ನೀವೇ ಕೇಳಿ
Kshetra Samachara
20/02/2021 07:43 pm