ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕಡೌನ್ ನಂತರ ಧಾರವಾಡದಾಗ ಓಪನ್ ಆಯ್ತು ನೋಡ್ರಿಪಾ ಥಿಯೇಟರ್

ಧಾರವಾಡ: ರಾಜ್ಯಾದ್ಯಂತ ಇಂದು ಎಂಟು ತಿಂಗಳ ಬಳಿಕ ಚಿತ್ರಮಂದಿರಗಳು ಆರಂಭಗೊಳ್ಳುತ್ತಿದ್ದು, ಅದರಂತೆ ಧಾರವಾಡದಲ್ಲಿಯೂ ಸಹ ಸಂಗಮ ಚಿತ್ರಮಂದಿರ ಮತ್ತೆ ಕಾರ್ಯಾರಂಭ ಮಾಡಿದ ಹಿನ್ನೆಲೆ‌ ಚಿತ್ರಮಂದಿರ ಸಿಬ್ಬಂದಿಗೆ ಸಿನಿಪ್ರಿಯರ ಬಳಗದಿಂದ ಸಿಹಿ ನೀಡಿ ಸಂಭ್ರಮಿಸಲಾಯಿತು.

ಕೊರೊನಾ ಲಾಕ್‌ಡೌನ್ ಬಳಿಕ ಇದೇ‌ ಮೊದಲ ಬಾರಿಗೆ ಆರಂಭಗೊಳ್ಳುತ್ತಿರುವ ಚಿತ್ರಮಂದಿರಗಳಲ್ಲಿ ಮನ್ಸೋರೆ ನಿರ್ದೇಶನದ "ಆ್ಯಕ್ಟ್ 1978" ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಇಂದು ಮೊದಲ ಶೋ ಆರಂಭಕ್ಕೂ ಮುಂಚೆ ಕೆಲಸ ನಿರ್ವಹಿಸಲು ಬಂದ ಚಿತ್ರಮಂದಿರ ಸಿಬ್ಬಂದಿಯನ್ನು ವಿಶೇಷವಾಗಿ ಸ್ವಾಗತಿಸಿಕೊಳ್ಳಲಾಯಿತು.

ಸಂಗಮ ಚಿತ್ರಮಂದಿರ ಸಿಬ್ಬಂದಿಗೆ ಧಾರವಾಡ ಸಿನಿ ಪ್ರಿಯರ ಬಳಗದ ವತಿಯಿಂದ ಸ್ವಿಟ್ ಬಾಕ್ಸ್ ನೀಡಿ ಸ್ವಾಗತಿಸಿಕೊಳ್ಳಲಾಯಿತು.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್ ಸುಬ್ಬಯ್ಯ ಹಾಗೂ ಧಾರವಾಡದ ಸಾಹಿತಿ ರಾಜಕುಮಾರ ಮಡಿವಾಳರ ನೇತೃತ್ವದಲ್ಲಿ ಚಿತ್ರಮಂದಿರ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸ್ವಾಗತಿಸಿಕೊಳ್ಳಲಾಯಿತು.

ಇನ್ನು 8 ತಿಂಗಳಿನಿಂದ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಆರಂಭದ ನಿರೀಕ್ಷೆಯಲ್ಲಿದ್ದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆ್ಯಕ್ಟ್ 1978 ಸಿನಿಮಾ ವೀಕ್ಷಿಸಿದರು.

Edited By : Nagesh Gaonkar
Kshetra Samachara

Kshetra Samachara

20/11/2020 03:14 pm

Cinque Terre

35.37 K

Cinque Terre

4

ಸಂಬಂಧಿತ ಸುದ್ದಿ