ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ರೈತರಿಂದ ಹಲವು ಬೇಡಿಕೆಗಳಿಗಾಗಿ ಮನವಿ

ನವಲಗುಂದ : ಹಲವು ಬೇಡಿಕೆಗಳಿಗಾಗಿ ಆಗ್ರಹಿಸಿ ನವಲಗುಂದ ಪಟ್ಟಣದ ರೈತ ಭವನದಲ್ಲಿ ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ಬುಧವಾರ ನವಲಗುಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಮಳೆಗೆ ಹಾನಿಯಾದ ತಾಲೂಕ ಪ್ರದೇಶ ಪರಿಶೀಲಿಸಿದ ಸಚಿವರು ಕೂಡಲೇ ಪರಿಹಾರ ಕೊಡಿಸಬೇಕು.ಇದಕ್ಕೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು. ರೈತರಿಗೆ ಸಾಲಕ್ಕೆ ಸತಾಯಿಸದೆ ಬ್ಯಾಂಕಿನವರಿಗೆ ಸೂಚನೆ ನೀಡಬೇಕು. ಹಾನಿಗೊಳಗಾದ ಫಸಲುಗಳಿಗೆ ವಿಮೆಯನ್ನು ಬಿಡುಗಡೆ ಗೊಳಿಸಬೇಕು. ಬ್ಯಾಂಕ ಗಳಲ್ಲಿನ ಸಿಬಿಲ್ ತೆಗೆದು ಹಾಕಲು ಮುಖ್ಯಮಂತ್ರಿಗಳು ತಮ್ಮ ನೇತೃತ್ವದಲ್ಲಿ ಬ್ಯಾಂಕ ಅಧಿಕಾರಿಗಳ ಸಭೆ ಕರೆಯಬೇಕು.

ಮಲಪ್ರಭಾ ಘಟಪ್ರಭಾ ಕಾಡಾ ಯೋಜನೆ ಬೆಳಗಾವಿ ಅವರಲ್ಲಿ 1992-93 ರ ಭೂ ಸಮಪಾತಳಿ ಮಾಡಿದ ಸುಮಾರು 370 ಲಕ್ಷ ಹಣ ಬಾಕಿ ಇದೆ ಇದು ರೈತನ ಊತಾರದ ಮೇಲೆ ಬಾಕಿ ಇದೆ ಅತಿವೃಷ್ಟಿ ಅನಾವೃಷ್ಟಿ ಅದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಮನ್ನಾ ಮಾಡಬೇಕು.

ನೆರೆ ಹಾವಳಿಯಾದ ಪ್ರದೇಶಗಳ ಸರ್ವೇ ಮಾಡಿ 72 ತಾಸುಗಳಲ್ಲಿ ಅರ್ಜಿ ಕೊಟ್ಟಂತಹ ರೈತರಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬಸನಗೌಡ ಫಕಿರಗೌಡರ, ಶಿವಪ್ಪ ಸಂಗಳದ, ಮಲ್ಲಪ್ಪ ಬಸೆಗಣ್ಣವರ, ಮಲ್ಲೇಶ ಉಪ್ಪಾರ, ಕರಿಯಪ್ಪ ತಳವಾರ,ಗಣಪತಿ ಜಲಗಾರ, ಸಿದ್ಧಲಿಂಗಪ್ಪ ಹಳ್ಳದ, ರವಿ ತೋಟದ, ಬಸಪ್ಪ ಬಳ್ಳೊಳ್ಳಿ, ಸಂಗಪ್ಪ ನಿಡುವಣಿ ಇತರರು ಇದ್ದರು.

ನವಲಗುಂದ ನಗರ ದ ರೈತ ಭವನದಲ್ಲಿ ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ಬುಧವಾರ ತಾಲೂಕ ಆಡಳಿತ ಅಧಿಕಾರಿ ಗಣೇಶ ಚಳ್ಳಕೆರೆ ಅವರಿಗೆ ಮನವಿ ನೀಡಿದರು.

Edited By : PublicNext Desk
Kshetra Samachara

Kshetra Samachara

08/09/2022 06:34 pm

Cinque Terre

4.26 K

Cinque Terre

0

ಸಂಬಂಧಿತ ಸುದ್ದಿ