ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬದುಕಿಗೆ ಮುನ್ನುಡಿ ಬರೆಯಿತು ಕೃಷಿ; ದೇಶಪಾಂಡೆ ಫೌಂಡೇಶನ್ ನಿಂದ ಮನೆ ಖುಷಿಯ ನೆಲೆ

ನವಲಗುಂದ: ಹತ್ತನೇ ತರಗತಿ ಕಲಿತ ಆ ರೈತ ಹೊತ್ತಾಗುವ ತನಕ ದುಡಿದು ಹೊನ್ನ ಬೆಳದಾನ ಹೊಲದಾಗ. ಚಿನ್ನದಂತಹ ಬೆಳೆ ಬೆಳೆದ ರೈತ ಚಂದದ ಬದುಕು ನಡೆಸ್ಯಾನ. ದೇಶಪಾಂಡೆ ಫೌಂಡೇಶನ್ ಸಹಾಯದಿಂದ ಕೃಷಿ ಹೊಂಡ ತೆಗೆಸಿ ಜಲಧಾರೆ ಹರಿಸಿ ಹೊನ್ನ ಬಿತ್ತ್ಯಾನ ಹೊಲದಾಗ...

ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ರೈತ ಉಮೇಶ ಯಲ್ಲಪ್ಪ ಕುಡವಕ್ಕಲಿಗರ ಒಕ್ಕಲುತನದಲ್ಲಿ ಹೆಸರು ಮಾಡಿದ್ದಾರೆ. ಆರು ಎಕರೆ ಹೊಲದಾಗ ಹೌದ..ಹೌದ... ಎನ್ನುವ ಹಾಗೇ ಬೆಳೆ ಬೆಳೆದು ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. 100×100 ಅಳತೆಯಲ್ಲಿ ಕೃಷಿ ಹೊಂಡ ತೆಗೆಸಿ ನೂರಕ್ಕೆ ನೂರರಷ್ಟು ಅನುಕೂಲ ಪಡೆದಿದ್ದಾರೆ. ಹಾಗಿದ್ದರೇ ಅನುಕೂಲದ ಬಗ್ಗೆ ಕೂಲಂಕಷವಾಗಿ ಹೇಳಿದ್ದಾರೆ ನೋಡಿ.

ಬಿಟಿ ಹತ್ತಿ, ಗೋವಿನ ಜೋಳ, ಮೆಣಸಿನಕಾಯಿಯಲ್ಲಿ ಭವಿಷ್ಯ ಕಂಡು ಹೆಸರು ಬೆಳೆಯಾಗ ಬದುಕನ್ನು ಹಸನಾಗಿಸಿದ್ದಾರೆ. 30,000ಕ್ಕೆ ಮೀಸಲಾಗಿದ್ದ ಕೃಷಿಯಾಗ ಮೂರು ಲಕ್ಷ ದುಡಿಯುವ ರೈತ ದುಡ್ಡೇ ದೊಡ್ಡಪ್ಪ ಕೃಷಿ ಅದರಪ್ಪ ಎಂಬುವಂತೇ ಸಾರಿ ಹೇಳಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/08/2022 06:51 pm

Cinque Terre

144.43 K

Cinque Terre

0

ಸಂಬಂಧಿತ ಸುದ್ದಿ