ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಭರದಿಂದ ಸಾಗಿದ 'ಹೆಸರು' ಕಟಾವು

ನವಲಗುಂದ : ಧಾರವಾಡ ಜಿಲ್ಲೆಯ ಮುಂಗಾರು ಅವಧಿಯ ಪ್ರಮುಖ ಅಲ್ಪಾವಧಿ ಬೆಳೆಯಾದ ಹೆಸರು ಬೆಳೆ ಕಟಾವಿಗೆ ಬಂದಿದ್ದು, ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಹೆಸರು ಕಟಾವು ಭರದಿಂದ ಸಾಗಿದೆ.

ಸತತವಾಗಿ ಸುರಿದ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದ ಹೆಸರು ಬೆಳೆ ಸಂಪೂರ್ಣ ನಾಶವಾಗಿವೆ. ಗಿಡಗಳಲ್ಲಿದ್ದಾಗಲೇ ಹೆಸರು ಮೊಳಕೆ ಹೊಡೆದಿವೆ. ಇದರಿಂದ ರೈತ ಕಂಗಲಾಗಿದ್ದಾನೆ.

ಇನ್ನು ಕೆಲ ಕಡೆಗಳಲ್ಲಿ ಹೆಸರು ಬೆಳೆ ಉತ್ತಮವಾಗಿ ಬಂದಿದ್ದು, ರೈತರು ಯಂತ್ರಗಳ ಮೂಲಕ ಕಟಾವಿಗೆ ಮುಂದಾಗಿದ್ದಾರೆ. ಬೃಹತ್ ಗಾತ್ರದ ಯಂತ್ರಗಳು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಟಾವು ಮಾಡುವಲ್ಲಿ ಮುಂದಾಗಿದ್ದು, ಕಟಾವು ಕಾರ್ಯ ಭರದಿಂದ ಸಾಗಿದೆ.

Edited By : PublicNext Desk
Kshetra Samachara

Kshetra Samachara

16/08/2022 12:53 pm

Cinque Terre

10.62 K

Cinque Terre

1

ಸಂಬಂಧಿತ ಸುದ್ದಿ