ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬಲೇ ಬಸವಾ.! ಕ್ರಿಮಿನಾಶಕ ಸಿಂಪಡಣೆಗೂ ನೀನೇ ಆಧಾರ

ಕುಂದಗೋಳ: ಸೊಂಪಾಗಿ ಬೆಳೆದ ಬೆಳೆಗಳಿಗೆ ಆಸರೆಯಾಗಬೇಕಿದ್ದ ವರುಣ ಬೇಸರ ಉಂಟಾಗುವ ರೀತಿ ಸುರಿಯುತ್ತಿದ್ದಾನೆ. ಪರಿಣಾಮ ಬೆಳೆದ ಬೆಳೆಗಳು ಹಳದಿ ವರ್ಣಕ್ಕೆ ತಿರುಗಿ ರೋಗ ಭಾದೆಗೆ ತುತ್ತಾಗುತ್ತಿವೆ.

ಹೌದು.! ರೋಗ ಬಾಧೆಗೆ ತುತ್ತಾದ ಬೆಳೆ ಉಳಿಸಿಕೊಳ್ಳಲು ರೈತರು ಕ್ರಿಮಿನಾಶಕ ಸಿಂಪಡಣೆ ಮೋರೆ ಹೋಗಿದ್ದಾರೆ. ಇದಕ್ಕಾಗಿ ಬೃಹತ್ ಯಂತ್ರ, ಡ್ರೋನ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಅಧಿಕವಾದ ದಿನದಲ್ಲಿ ರೈತನಿಗೆ ಯಂತ್ರೋಪಕರಣದ ಖರ್ಚು ಹಾಗೂ ಡ್ರೋನ್ ಬಾಡಿಗೆ ಖರ್ಚು ನಿಬಾಯಿಸುವುದೇ ಸವಾಲಾಗಿದೆ.

ಈ ಪರಿಸ್ಥಿತಿ ನಡುವೆ ಇಲ್ಲೋರ್ವ ರೈತ ನಿತ್ಯ ಕೃಷಿ ಕಾಯಕಕ್ಕೆ ಎತ್ತುಗಳನ್ನು ಬಳಸಿ ಅತಿ ಕಡಿಮೆ ಖರ್ಚಿನಲ್ಲಿ ಶೇಂಗಾ ಹಾಗೂ ಇತರೆ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾನೆ.

ಕುಂದಗೋಳದ ವೀರೇಶ್ ರವದಿ ಎಂಬ ರೈತ ಚಕ್ಕಡಿ ಹೂಡಿ ಅದರಲ್ಲಿ ನೀರಿನ ಟ್ಯಾಂಕರ್ ಇಟ್ಟು ಸ್ಪಿಂಕ್ಲರ್ ಪೈಪ್ ಸಿಂಗಲ್ ಕ್ರಿಮಿನಾಶಕ್ ಮೋಟರ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಈ ಮೂಲಕ ಕಡಿಮೆ ಖರ್ಚಿನಲ್ಲಿ ಕೃಷಿ ಕಾರ್ಮಿಕರ ಅಭಾವದ ನಡುವೆ ಕ್ರಿಮಿನಾಶಕ ಸಿಂಪಡಣೆ ಕಾರ್ಯ ಕೈಗೊಂಡು ಇತರರಿಗೂ ಮಾದರಿ ಆಗಿದ್ದಾರೆ.

Edited By : Somashekar
Kshetra Samachara

Kshetra Samachara

27/07/2022 06:46 pm

Cinque Terre

23.65 K

Cinque Terre

0

ಸಂಬಂಧಿತ ಸುದ್ದಿ