ನವಲಗುಂದ: ಕೃಷಿಯಲ್ಲಿ ಉತ್ತಮ ಆದಾಯ ಗಳಿಸಬೇಕು, ನಾವೂ ನಾಲ್ಕು ಜನರಂತೆ ಮುಂದೆ ಬರಬೇಕು, ಏನಾದ್ರೂ ಸಾಧನೆ ಮಾಡ್ಬೇಕು ಎಂಬ ಆಕಾಂಕ್ಷೆ ಯಾರಿಗಿಲ್ಲಾ ಹೇಳಿ ? ಎಲ್ಲರಿಗೂ ಇದ್ದೇ ಇರುತ್ತೆ ಅಲ್ವಾ ?
ಅಂತಹ ಆಕಾಂಕ್ಷೆಯನ್ನು ಇಲ್ಲೊಬ್ಬ ರೈತ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವ ಮೂಲಕ ಸಾಕಾರ ಮಾಡಿಕೊಂಡು ತಮ್ಮ 10 ಎಕರೆ ಜಮೀನು 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು 60ರ ಇಳಿವಯಸ್ಸಿನಲ್ಲೂ ಕೃಷಿಯಲ್ಲಿ ಕಂಡ ಕನಸನ್ನು ನನಸಾಗಿಸಿ ಇಂದಿನ ದೇಶ ಕೃಷಿ ಸಂಚಿಕೆಯ ಸಾಧಕರಾಗಿದ್ದಾರೆ.
ಈ ಸಾಧಕರೇ ನವಲಗುಂದ ತಾಲೂಕಿನ ಬೆಳವಟಿಗಿ ಗ್ರಾಮದ ಪ್ರಗತಿಪರ ರೈತ ನಾಗಪ್ಪ ಬಡಿಗೇರ್. ಇವರು ಕೃಷಿಹೊಂಡದ ಮೂಲಕ ತೋಟಗಾರಿಕೆ, ವಾಣಿಜ್ಯ, ತರಕಾರಿ ಬೆಳೆ ಬೆಳೆದು ಉತ್ತಮ ಲಾಭ ಹಾಗೂ ಮಳೆ ಅಭಾವದ ನಡುವೆ ಲಕ್ಷ ಲಕ್ಷ ಆದಾಯ ಕಂಡಿದ್ದಾರೆ. ಇದೇ ರೈತ ನಾಗಪ್ಪ ಬಡಿಗೇರ್ ಯಾವ ರೀತಿ ಕೃಷಿಹೊಂಡ ನಿರ್ಮಾಣ ಮಾಡಿಕೊಂಡ್ರು ? ದೇಶಪಾಂಡೆ ಫೌಂಡೇಶನ್ ಇವರಿಗೆ ಯಾವ ನೆರವನ್ನು ಕೊಟ್ಟಿದೆ ? ಕೃಷಿಹೊಂಡದಿಂದ ಇವರ ಆದಾಯ ಹೇಗೆ ಬದಲಾಗಿದೆ ? ಎಂಬುದರ ಕುರಿತು ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/07/2022 04:26 pm