ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರೇವಣಸಿದ್ದಪ್ಪನಿಗೆ ಕೃಷಿ ಖುಷಿ, ಕೃಷಿಹೊಂಡವೇ ಆದಾಯಕ್ಕೆ ಆಧಾರ

ನವಲಗುಂದ: ಕೃಷಿಯಲ್ಲಿ ಹೊಸತನವಿದೆ. ದುಡಿದು ತಿನ್ನುವ ಗಟ್ಟಿತನವಿದೆ. ಎಲ್ಲದಕ್ಕಿಂತ ಮಿಗಿಲಾಗಿ ಭೂತಾಯಿಯ ಮಣ್ಣಿನ ಮಗ ನಾನು ಎಂಬ ಹೆಮ್ಮೆ ಇದೆ.

ಇಂತಹ ಹೆಮ್ಮೆಯನ್ನೇ ತಮ್ಮ ಕೃಷಿಗೆ ಸ್ಪೂರ್ತಿ ಚಿಲುಮೆಯಾಗಿಸಿ ಕೃಷಿಹೊಂಡದ ಆಶ್ರಿತವಾಗಿ ಕಪ್ಪು ನೆಲವನ್ನು ಉತ್ತಿ ಬಿತ್ತಿ ಬೆವರ ಕಾಯಕದಲ್ಲೇ ಶ್ರೀಮಂತಿಕೆ ಕಂಡವರೇ ನವಲಗುಂದದ ತಾಲೂಕಿನ ಬೆಳವಟಿಗಿ ಗ್ರಾಮದ ಪ್ರಗತಿಪರ ರೈತ ರೇವಣಸಿದ್ದಪ್ಪ ರಾಮಲಿಂಗಪ್ಪ. ಇವರು ಇಂದಿನ ದೇಶ್ ಕೃಷಿ ಸಂಚಿಕೆಯ ಸಾಧಕ.

ಈ ಸಾಧಕ ತಮ್ಮ 4ಎಕರೆ ಜಮೀನಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಯಾವ ರೀತಿ ಬೇಸಾಯ ಮಾಡಿದ್ರು? ಏನೆಲ್ಲಾ ಬದಲಾವಣೆ ಕಂಡರು? ಕೃಷಿಹೊಂಡದ ಬೇಸಾಯದ ಲಾಭವೇನು? ಎಂಬುದರ ಕುರಿತು ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ಕೊಡುಗೆ, ಬೀಜ ಗೊಬ್ಬರ ಪೂರೈಕೆ, ಬೆಳೆಗಳ ಸಲಹೆ ಅನ್ನದಾತರ ಬದುಕನ್ನು ಹಸನಾಗಿಸಿ ಹೊಸ ಅಭಿವೃದ್ಧಿಯನ್ನು ಕಟ್ಟಿಕೊಡುತ್ತಿದ್ದು ರೈತ ರೇವಣಸಿದ್ದಪ್ಪ ನಾಲ್ಕು ಎಕರೆ ಜಮೀನಿನಲ್ಲಿ ವಾರ್ಷಿಕ 3.50 ಲಕ್ಷ ಆದಾಯ ಪಡೆಯಲು ಸಹಕಾರಿಯಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/07/2022 08:08 pm

Cinque Terre

179.69 K

Cinque Terre

2

ಸಂಬಂಧಿತ ಸುದ್ದಿ