ನವಲಗುಂದ: ತಾಲ್ಲೂಕಿನಲ್ಲಿ ರೈತರು ತಮ್ಮ ಹೊಲಗಳಲ್ಲಿ ಹೆಸರು, ಉದ್ದು ಬೆಳೆ ಬಿತ್ತನೆ ಉತ್ಸಾಹದಿಂದ ಮಾಡಿದ್ದರು. ಈಗ ತಾಲ್ಲೂಕಾ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಹೆಸರು, ಉದ್ದು ಬೆಳೆಗೆ ಸೂಕ್ತ ಪ್ರಮಾಣಕ್ಕಿಂತ ಹೆಚ್ಚಿನ ಮಳೆ ಆದ ಪರಿಣಾಮ ಬೆಳೆಗಳು ಹಳದಿ ಚುಕ್ಕೆ ರೋಗದ ಭಾದೆಗೆ ತುತ್ತಾಗುತ್ತಿವೆ. ಇದರಿಂದ ರೈತರು ಹೈರಾಣಾಗಿದ್ದಾರೆ.
ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಾನವಾಡ, ಅಳಗವಾಡಿ, ಪಡೆಸುರ, ಗುಡಿಸಾಗರ, ನಾಗನೂರ, ಸೋಟಕನಾಳ, ಕಡದಳ್ಳಿ, ಆರಟ್ಟಿ, ತಡಹಾಳ ಗ್ರಾಮದ ಕೃಷಿ ಪ್ರದೇಶಗಳ ರೈತರ ಹೆಸರು ಹಾಗೂ ಉದ್ದು ಬೆಳೆಗಳ ಹೊಲಗಳು ಮಳೆ ಪ್ರಮಾಣ ಜಾಸ್ತಿಯಾಗಿ ಮಣ್ಣಿನ ತೇವಾಂಶ ಹೆಚ್ಚಾದ ಹಿನ್ನೆಲೆ ಹಳದಿ ಚುಕ್ಕೆ ರೋಗ ಭಾದೆಗೆ ತಿರುಗುತ್ತಿವೆ.
ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ತಾಲ್ಲೂಕಿನಾದ್ಯಂತ ಮುಂಗಾರು ಬೆಳೆಗಳು ರೋಗ ಭಾದೆಗೆ ತುತ್ತಾದರೆ ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ಗ್ರಾಮೀಣ ಪ್ರದೇಶಗಳಾದ್ಯಂತ ತಿಳುವಳಿಕೆ ಹೇಳಬೇಕಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
27/06/2022 11:45 am