ಕುಂದಗೋಳ: ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕುಂದಗೋಳ ವಲಯ ಅರಣ್ಯಾಧಿಕಾರಿಗಳು ಸಾಮಾಜಿಕ ವಲಯದ ವತಿಯಿಂದ ರೈತರಿಗೆ ಜಮೀನಿನ ಸುತ್ತ ಬೆಳೆಸಲು ಉಚಿತವಾಗಿ ಸಸಿ ನೀಡಲು ಮುಂದಾಗಿದ್ದಾರೆ.
ಹೌದು, ಈಗಾಗಲೇ 2022-23ನೇ ಸಾಲಿನ ಮಳೆಗಾಲದಲ್ಲಿ ಪ್ರತಿ ರೈತರು ಹಾಗೂ ಗ್ರಾಮ ಪಂಚಾಯಿತಿಗೆ ವಿತರಿಸಲು ಸಾಮಾಜಿಕ ಅರಣ್ಯ ವಲಯ ಜಿಗಳೂರಿನಲ್ಲಿ ಸಾಗವಾನಿ, ಪೇರಳೆ, ಸಂಪಿಗೆ, ಹೆಬ್ಬೇವು, ಬಿದಿರು, ಮಹಾಗನಿ, ಹಿಪ್ಪುನೇರಳೆ, ಬೇವು, ಕಾಡು ಬಾದಾಮ್, ಭದ್ರಾಕ್ಷಿ, ಬಂಗಾಲಿ, ಗುಲ್ಮೋರ, ಬನ್ನಿ, ಬಿಲ್ವ ಪತ್ರೆ, ಬಸವನಪಾದ, ಇಲಾಚಿ ಹುಣಸೆ, ರೇನ್ ಟ್ರೀ, ತಪಸಿ ಸೇರಿದಂತೆ ವಿವಿಧ ಜಾತಿಯ ಒಟ್ಟು 78 ಸಾವಿರ ಸಸಿಗಳು ಲಭ್ಯವಿದೆ.
ಆಸಕ್ತ ರೈತರು ಕೂಡಲೇ ತಮ್ಮ ತಮ್ಮ ಜಮೀನಿನ ಖಾತೆ ಉತಾರ ಹಾಗೂ ಗ್ರಾಮ ಪಂಚಾಯಿತಿ ಶಿಫಾರಸ್ಸು ಪತ್ರದೊಂದಿಗೆ ಜಿಗಳೂರು ನರ್ಸರಿಗೆ ಭೇಟಿ ನೀಡಿ ಸಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ 9611277545 ಕರೆ ಮಾಡಬಹುದು ಎಂದು ಅಧಿಕಾರಿಗಳು ʼಪಬ್ಲಿಕ್ ನೆಕ್ಸ್ಟ್ʼ ಮೂಲಕ ತಿಳಿಸಿದ್ದಾರೆ.
Kshetra Samachara
09/06/2022 04:11 pm