ನವಲಗುಂದ : ಕೃಷಿಯಲ್ಲಿ ಹೊಸ ಧೈರ್ಯ, ನೀರಾವರಿ ಮೂಲಕ ಉತ್ತಮ ಬೆಳೆ ಬೆಳೆಯಬಲ್ಲ ಉತ್ಸಾಹ, ಯುವ ರೈತರ ಕೃಷಿ ಪ್ರೇಮಕ್ಕೆ ಕೊಡುಗೆಯಾದ ಕೃಷಿಹೊಂಡ… ಇದುವೇ ದೇಶಪಾಂಡೆ ಫೌಂಡೇಶನ್ ಸಹಕಾರದ ಫಲ.
ಒಣ ಬೇಸಾಯದ ಮಾರ್ಗದ ಕೃಷಿ ಪದ್ಧತಿಯನ್ನು ಅನುಸರಿಸಿದ್ದ ರೈತರಿಗೆ ಕೃಷಿಹೊಂಡ ತಮ್ಮಿಷ್ಟದ ಬೆಳೆ ಬೆಳೆಯಲು ಹಾಗೂ ಆ ಬೆಳೆಗೆ ಪೂರಕವಾದ ಜಲ ನೀಡಿದೆ. ಈ ಮೂಲಕ ನವಲಗುಂದ ತಾಲೂಕಿನ ತಲೆಮೊರಬದ ರೈತ ಯಲ್ಲಪ್ಪ ಸುಳ್ಳದನಿಗೆ ಜಯ ಸಿಕ್ಕಿದೆ..
ತನ್ನ 2 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರ ಪಡೆದು 100/100 ಕೃಷಿಹೊಂಡ ನಿರ್ಮಿಸಿಕೊಂಡ ರೈತ ಯಲ್ಲಪ್ಪ ಮುಂಗಾರು ಹತ್ತಿ, ಹೆಸರು, ಈರುಳ್ಳಿ, ಹಿಂಗಾರು ಕುಸುಬೆ, ಕಡಲೆ ಬೆಳೆದು ಅತ್ಯುತ್ತಮ ಆದಾಯ 3 ಲಕ್ಷ ಸಂಪಾದನೆ ಮಾಡಿದ್ದಾರೆ.
ರೈತನ ಕೃಷಿ ಭೂಮಿಯ ಯಾವುದೇ ಬೆಳೆಗೆ ಪೂರಕವಾದ ಕೃಷಿಹೊಂಡದ ನೀರು, ಅನ್ನದಾತನಿಗೆ ಅನುಕೂಲವಾಗಿ ಅತಿ ಕಡಿಮೆ ಭೂಮಿ ಹೊಂದಿದ ರೈತರು ಸಹ ಶ್ರಮದ ಕಾಯಕದಲ್ಲಿ ಶ್ರೀಮಂತರಾಗುವ ಮಾರ್ಗ ತೋರಿದೆ. ಒಟ್ಟಾರೆ ದಣಿವರಿಯದೇ ದುಡಿಯುವ ರೈತರನ್ನು ಧನಿಯಾಗಿ ಮಾಡಲು ಕೃಷಿಹೊಂಡ ಅದೆಷ್ಟೋ ರೈತರಿಗೆ ಕೊಡುಗೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/05/2022 09:46 am