ಧಾರವಾಡ: ಆಧುನಿಕತೆಯಲ್ಲಿ ಬಡವಾಗುತ್ತಿರುವ ಕೃಷಿ ಕ್ಷೇತ್ರಕ್ಕೆ ಕೊಡುಗೆಯಾಗಿ ನೀರಿನ ಬವಣೆ ಎದುರಿಸುತ್ತಿರುವ ರೈತನಿಗೆ ಸಂಜೀವಿನಿಯಾಗಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಅನ್ನದಾತನ ಬಾಳಲ್ಲಿ ಬೆಳಕು ಚೆಲ್ಲಿದೆ.
ಧಾರವಾಡ, ಗದಗ, ನವಲಗುಂದ, ನರಗುಂದ, ಅಣ್ಣಿಗೇರಿ ತಾಲೂಕಿನ ಹಳ್ಳಿಗರಿಗೆ ಈ ಕೃಷಿಹೊಂಡ ಬೇಸಾಯದ ಅನುಕೂಲದ ಮಾರ್ಗದ ಜೊತೆ ಅತಿ ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ಪಡೆಯುವ ದಿಟ್ಟತನಕ್ಕೆ ರೈತನಿಗೆ ನೆರವಾಗಿದೆ.
ಇಂತಹ ಮಾರ್ಗ ಅನುಸರಿಸಿ ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದ ರೈತ ಇಮಾಮಸಾಬ್ ಬುಡ್ಡಿಮ್ಮನವರ ಎಂಬ ರೈತ ತಮ್ಮ ಹದಿನೈದು ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಕೃಷಿಹೊಂಡದ ಕೃಷಿಯ ಅನುಭವದ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಒಟ್ಟಾರೆ ಕೃಷಿ ಕ್ಷೇತ್ರಕ್ಕೆ ಬಲ ತುಂಬಿದ ಇನ್ನೊಂದು ಕೃಷಿಹೊಂಡ ಬೇಕೆಂದು ಆ ಕೃಷಿಹೊಂಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ ರೈತ ಇಮಾಮ್‌ಸಾಬ್ ಬುಡ್ಡಿಮ್ಮನವರ ಪ್ರಗತಿಪರ ಕೃಷಿಕನೇ ಸರಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/05/2022 04:17 pm