ನವಲಗುಂದ : ಐತಿಹಾಸಿಕ ಹಿನ್ನಲೆ ಹೊಂದಿರುವ ಸುಪ್ರಸಿದ್ದ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ಶ್ರೀ ಬಸವೇಶ್ವರ ದೇವರ ಜಾತ್ರೆ ಈಗಾಗಲೇ ಆರಂಭವಾಗಿದೆ. ಈ ಹಿನ್ನೆಲೆ ಇಂದು ಬಸವೇಶ್ವರ ದೇವರ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಷ್ಟೇ ಅಲ್ಲದೇ ಮೇ 19 ಅಂದರೆ ಗುರುವಾರವಾದ ಇಂದು ಸಾಯಂಕಾಲ 5 ಗಂಟೆಗೆ ಭಜನಾ ಮೇಳ, ಕರಡಿ ಮಜಲು, ಡೊಳ್ಳಿನ ಮಜಲು, ಹೆಜ್ಜೆ ಮಜಲುಗಳ ಮೂಲಕ ವಿಜೃಂಭನೆಯಿಂದ ರಥೋತ್ಸವವು ಜರುಗಲಿದೆ. ಇನ್ನು ಇಂದು ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಪೂಜೆಗೆ ಭಕ್ತರು ಅಪಾರ ಪ್ರಮಾಣದಲ್ಲಿ ಆಗಮಿಸಿದ್ದರು.
Kshetra Samachara
19/05/2022 01:14 pm