ನವಲಗುಂದ : ಒಣ ಬೇಸಾಯದಲ್ಲಿ ಬದಲಾವಣೆ ತಂದು ರೈತರು ಪರ್ಯಾಯ ಮಾರ್ಗ ಅನುಸರಿಸಿ ತಮ್ಮಿಷ್ಟದ ಬೆಳೆ ಬೆಳೆಯಲು ದೇಶಪಾಂಡೆ ಫೌಂಡೇಶನ್ ಮಹತ್ವಾಕಾಂಕ್ಷಿ ಕೊಡುಗೆ ನೆರವಾಗಿದೆ.
ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಾರ್ಯ, ಒಣ ಬೇಸಾಯದ ಮಾರ್ಗ ಅನುಸರಿಸಿ ಸಿಮೀತ ಬೆಳೆಗೆ ಮಾತ್ರ ಅಂಟಿಕೊಂಟಿದ್ದ ರೈತರಿಗೆ ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ತುಂಬಿದೆ.
ಅದರಂತೆ ಈಗಾಗಲೇ ಅದೆಷ್ಟೋ ಜನ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳಲು ಇಚ್ಚಿಸಿದ್ದು, ಅದರಲ್ಲಿ ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ರಮೇಶ್ ಯೋಗಪ್ಪ ತಳವಾರ ಸಹ ಒಬ್ಬರಾಗಿದ್ದಾರೆ.
ತಮ್ಮ ಐದು ಎಕರೆ ಜಮೀನಿನಲ್ಲಿ ಈಗಾಗಲೇ ಕೃಷಿಹೊಂಡ ನಿರ್ಮಿಸಿಕೊಳ್ಳುತ್ತಿರುವ ರೈತ ರಮೇಶ್ ಕಬ್ಬು, ಬಾಳೆ ಬೆಳೆ ಬೆಳೆಯಲು ಇಚ್ಚಿಸಿ ಈಗಾಗಲೇ ಅನೇಕ ರೈತರ ಸಲಹೆ ಸಹ ಸಂಗ್ರಹಿಸಿಸುತ್ತಿದ್ದಾರೆ.
ಒಟ್ಟಾರೆ ಕೃಷಿಹೊಂಡ ನಿರ್ಮಾಣಕಾರ್ಯ ರೈತನಿಗೆ ವರದಾನವಾಗಿ ಆದಾಯವನ್ನು ದ್ವಿಗುಣಗೊಳಿಸಲು ಸಹಕಾರಿಯಾಗಿ ಬೆಳೆಗೂ ಪೂರಕವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/05/2022 05:37 pm