ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರೈತ ಬಸವನ ಬಾಳಲ್ಲಿ ರೇಷ್ಮೆ ಕೃಷಿ, ಬೆಳೆಗೆ ಕೃಷಿಹೊಂಡವೇ ಖುಷಿ

ನವಲಗುಂದ : ಮಳೆ ಆಶ್ರಿತ ಬೇಸಾಯದಲ್ಲಿ ಪರ್ಯಾಯ ಬೆಳೆ ಕೈಗೊಳ್ಳಲಾಗದೆ ವಾಣಿಜ್ಯ ಬೆಳೆ ಹತ್ತಿಗೆ ಸೀಮಿತವಾದ ರೈತರೀಗ ಕೃಷಿಹೊಂಡ ಆಶ್ರಿತ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಮಳೆ ಅನುಸಾರವಾದ ಕೃಷಿಯಲ್ಲಿ ಸೀಮಿತವಾದ ಬೆಳೆಯ ಬದಲಾಗಿ ತೋಟಗಾರಿಕೆ ಬೆಳೆ ತರಕಾರಿ, ಚಿಕ್ಕು, ಪೇರಲ್, ಬೆಳೆ ಬೆಳೆಯಲು ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಬಸವರಾಜ ತಳವಾರ ತನ್ನಿಚ್ಚೆಯಂತೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆ ಪ್ರಯೋಗಕ್ಕೆ ಕೃಷಿಹೊಂಡದ ಸಹಾಯ ಪಡೆಯಲು ಆಲೋಚಿಸಿದ ರೈತ ಬಸವರಾಜ ಕೃಷಿಹೊಂಡ ನಿರ್ಮಾಣದ ಮಣ್ಣನ್ನು ಭೂಮಿ ಸಮತಟ್ಟಾಗಿಸಲು, ಬದು ನಿರ್ಮಿಸಲು ಬಳಸುತ್ತಿದ್ದಾರೆ.

ಈಗಾಗಲೇ ಒಣ ಬೇಸಾಯದ ಮಾರ್ಗದಲ್ಲಿ ಶ್ರಮಕ್ಕೆ ತಕ್ಕ ಆದಾಯ ಕಾಣದ ರೈತರು ಕೃಷಿಹೊಂಡದ ಮೂಲಕ ಲಾಭ ಕಂಡುಕೊಂಡಿದ್ದಾರೆ. ಇದೀಗ ಅಂತಹ ರೈತರ ಮಾರ್ಗದರ್ಶನದಲ್ಲಿ ರೈತ ಬಸವರಾಜ ದೇಶಪಾಂಡೆ ಫೌಂಡೇಶನ್ ಸಹಯೋಗದ ಕೃಷಿಹೊಂಡಕ್ಕೆ ಸೈ ಎಂದಿದ್ದಾರೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/04/2022 09:36 pm

Cinque Terre

149.92 K

Cinque Terre

0

ಸಂಬಂಧಿತ ಸುದ್ದಿ