ನವಲಗುಂದ: ರೈತಾಪಿ ಜಮೀನುಗಳಲ್ಲಿ ಮತ್ತೆ ಹಿಟಾಚಿ ಯಂತ್ರದ ಶಬ್ದ ಕೇಳುತ್ತಿದೆ. ಒಂದು ಕೃಷಿಹೊಂಡ ಹೊಂದಿದವರಿಗೆ ಮತ್ತೊಂದು, ಇಲ್ಲದವರಿಗೆ ಹೊಸದೊಂದು ಕೃಷಿಹೊಂಡ ನಿರ್ಮಾಣದ ಕಾರ್ಯ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ ಬಿರುಬಿಸಿಲನ್ನೂ ಲೆಕ್ಕಿಸದೇ ನಡೆಯುತ್ತಿದೆ.
ಇಂತಹ ಕೃಷಿಹೊಂಡ ನಿರ್ಮಾಣ ಕಾರ್ಯದ ಸಾಕಾರಕ್ಕೆ ಈಗಾಗಲೇ ಕೃಷಿಹೊಂಡ ನಿರ್ಮಿಸಿಕೊಂಡ ರೈತರ ಸಾಧನೆಯೇ ಕಾರಣ. ಅದಕ್ಕೆ ಸಾಕ್ಷಿ ಎಂಬಂತೆ 16 ಎಕರೆ ಜಮೀನಿನಲ್ಲಿ ಕೃಷಿಹೊಂಡದ ಕೃಷಿ ಕೈಗೊಂಡ ನವಲಗುಂದ ತಾಲೂಕಿನ ತಲೆಮೊರಬದ ರೈತ ರಮೇಶ್ ಶಿವಾನಂದ ಮನಗೂಳಿ ವಾರ್ಷಿಕ 8 ಲಕ್ಷ ಆದಾಯ ಗಳಿಸಿದ್ದಾರೆ.
ತಮ್ಮ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡ ರೈತ ರಮೇಶ್ ಮುಂಗಾರು ಹತ್ತಿ, ಹೆಸರು, ಈರುಳ್ಳಿ ಹಿಂಗಾರು ಕುಸುಬೆ, ಕಡಲೆ ಜೊತೆ ಮಳೆರಾಯನ ನಿರ್ಗಮನದ ನಡುವೆ ಉತ್ತಮ ಬೆಳೆ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.
ಕೃಷಿಯಲ್ಲಿ ವಿಶೇಷ ಪ್ರೀತಿ ಹೊಂದಿದ ರಮೇಶ್ ಮನಗೂಳಿ ತಮ್ಮ ಇತರ ಜಮೀನುಗಳಿಗೆ ಹೊಸ ಕೃಷಿಹೊಂಡ ನಿರ್ಮಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ. ಒಟ್ಟಿನಲ್ಲಿ ಕೃಷಿಹೊಂಡ ಕೃಷಿ ಅದೆಷ್ಟೋ ರೈತರ ಬಾಳಲ್ಲಿ ಖುಷಿ ತಂದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/04/2022 09:57 am