ಅಣ್ಣಿಗೇರಿ: ಅನ್ನದಾತನ ಜಮೀನಿನ ಕೃಷಿ ಕಾಯಕಕ್ಕೆ ದೇಶಪಾಂಡೆ ಫೌಂಡೇಶನ್ ನೀಡಿದ ಕೊಡುಗೆಯೊಂದು ಕೃಷಿ ಭೂಮಿಯ ವಾರ್ಷಿಕ 3 ಲಕ್ಷ ರೂ.ನಷ್ಟು ಆದಾಯಕ್ಕೆ ಸಾಕ್ಷಿಯಾಗಿದೆ.
ಹೌದು. ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ರೈತ ಮಂಜುನಾಥ ಚವಡಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ ಮೂರು ಎಕರೆ ಜಮೀನಿನಲ್ಲಿ 70/70 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಏಕೈಕ ಬೆಳೆ ಉಳ್ಳಾಗಡ್ಡಿ ಬೆಳೆದು ಹಾಗೂ ಹಿಂಗಾರು ಸಂಪೂರ್ಣ ಕಡಲೆ ಬೆಳೆ ಬೆಳೆದು ಅತ್ಯುತ್ತಮ ಆದಾಯ ಗಳಿಸಿದ್ದಾರೆ.
ವಿಶೇಷ ಎಂದ್ರೆ, ಭೂತಾಯಿ ಮಡಿಲಲ್ಲಿ ಮಳೆ ಹೋದ ಸಂದರ್ಭದಲ್ಲೂ ಎದೆಗುಂದದೆ ರೈತರ ಕೃಷಿ ಕಾಯಕ ಕೈಗೊಳ್ಳಲು ಕೃಷಿಹೊಂಡ ಬಲು ಸಹಕಾರಿಯಾಗಿದೆ.
ಕೃಷಿ ಕ್ಷೇತ್ರದಲ್ಲಿ ಅತಿ ಕಡಿಮೆ ಭೂಮಿ ಹೊಂದಿದ ರೈತರು ಬಾಳಲ್ಲಿ ಕೃಷಿಹೊಂಡ ವರದಾನವಾಗಿ ಬೆಳೆಗೆ ಪೂರಕವಾಗಿದ್ದು, ಪರ್ಯಾಯ ಬೆಳೆ ಕೈಗೊಳ್ಳಲು ಉಪಕಾರಿಯಾಗಿದೆ. ರೈತರು ಈಗಾಗಲೇ ಹುದುಗಿ ಹೋದ ದೇಶಪಾಂಡೆ ಫೌಂಡೇಶನ್ ಸಹಕಾರದ ಕೃಷಿಹೊಂಡಗಳನ್ನು ಪುನಃ ಹೂಳೆತ್ತಿ ಕೊಡುವಂತೆ ವಿನಂತಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/04/2022 02:18 pm