ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದ ಮೆಣಸಿನಕಾಯಿಗೆ ಹೊರ ದೇಶದಲ್ಲೂ ಖ್ಯಾತಿ - ಉಮೇಶ್ ಹೆಬಸೂರ

ಕುಂದಗೋಳ : ತಾಲೂಕಿನ ಎಲ್ಲೇಡೆ ಬೆಳೆಯುವ ಮೆಣಸಿನಕಾಯಿ ಬೆಳೆ, ನಮ್ಮ ದೇಶವಷ್ಟೇ ಅಲ್ಲಾ ಹೊರ ದೇಶದಲ್ಲೂ ಬ್ಯಾಡಗಿ ಮೆಣಸಿನಕಾಯಿ ಎಂದೇ ಮಾರುಕಟ್ಟೆ ಮೂಲಕ ಖ್ಯಾತಿ ಗಳಿಸಿದೆ, ಆದ್ರೇ, ಅತಿವೃಷ್ಟಿ ಕಾರಣ ಆ ಬೆಳೆ ಈಗಿಲ್ಲಾ ಎಂದು ಮಾಜಿ ಜಿಪಂ ಸದಸ್ಯ ಕಾರ್ಯಕ್ರಮದ ಅಧ್ಯಕ್ಷ ಉಮೇಶ್ ಹೆಬಸೂರ ಹೇಳಿದರು.

ಅವರು ಕುಂದಗೋಳ ತಾಲೂಕಿನ ಗುಡೇನಕಟ್ಟಿಯಲ್ಲಿ ನಡೆದ ಸಾಂಬಾರು ಮಂಡಳಿ ಮತ್ತು ಕೈಗಾರಿಕಾ ಸಚಿವಾಲಯ ಹಾವೇರಿ ಇವರ ಸಹಯೋಗದಲ್ಲಿ ಅಮರಶಿವ ರೈತ ಉತ್ಪಾದಕ ಕಂಪನಿ ಇವರ ನೇತೃತ್ವದಲ್ಲಿ ನಡೆದ ಮೆಣಸಿನಕಾಯಿ ಬೆಳೆ ಗುಣಮಟ್ಟ ಹಾಗೂ ಬೆಳೆ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ ಸಂಪೂರ್ಣ ಕುಂದಗೋಳ ತಾಲೂಕಿನಲ್ಲಿ ಬೆಳೆಯುವ ಮೆಣಸಿನಕಾಯಿ, ಬ್ಯಾಡಗಿ ಚಿಲ್ಲಿ ಎಂಬ ಹೆಸರಿನಲ್ಲಿ ಬಿಕರಿ ಆಗುತ್ತದೆ, ಆ ಬೆಳೆ ಗುಣಮಟ್ಟ ಹಾಗೂ ರುಚಿ ಶ್ರೇಯಸ್ಸು ನಮ್ಮ ರೈತರಿಗೆ ಸಲ್ಲಬೇಕು ಎಂದರು.

ಉಪನ್ಯಾಸಕ ವಿನಯಕುಮಾರ್ ಮಾತನಾಡಿ ಬೆಳೆ ಬೆಳೆಯಲು ಬಳಸಬೇಕಾದ ಪೋಷಕಾಂಶ ಹಾಗೂ ಬೆಳೆ ಗುಣಮಟ್ಟದ ಜವಾಬ್ದಾರಿಗಳನ್ನು ರೈತರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಸಮಗ್ರ ಮೆಣಸಿನಕಾಯಿ ಬೆಳೆಗಾರರ ಸಂಘದ ಸದಸ್ಯರು ಹಾಗೂ ಗುಡೇನಕಟ್ಟಿ ಗ್ರಾಮದ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

09/02/2022 05:23 pm

Cinque Terre

16.68 K

Cinque Terre

0

ಸಂಬಂಧಿತ ಸುದ್ದಿ