ನವಲಗುಂದ : ಇಲ್ಲೋಂದು ತಾಲೂಕಿನ ಹಳ್ಳಿಗಳು ಈ ಸರ್ಕಾರದ ಭರವಸೆ ನಂಬದೆ ಒಂದು ಸಂಸ್ಥೆ, ಆ ಸಂಸ್ಥೆ ಸಹಾಯ ಪಡೆದು ಇಂದು ಲಕ್ಷ ಲಕ್ಷ ಆದಾಯ ಗಳಿಕೆ ಜೊತೆ ನಷ್ಟವಿಲ್ಲದ ಕೃಷಿ ಕಾಯಕ ಅನುಸರಿಸಿದ್ದಾರೆ. ಎಂದ್ರೇ ಅದು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣದ ಕಾಮಗಾರಿ ಮೂಲಕ.
ಹೀಗೆ ಒಂದು ಸುತ್ತು ನವಲಗುಂದ ತಾಲೂಕಿನ ರೈತರ ಹೊಲಗಳಲ್ಲಿ ಕಣ್ಣು ಹಾಯಿಸಿದ್ರೇ ಎಲ್ಲರ ಹೊಲದಲ್ಲೂ ಕೃಷಿ ಹೊಂಡ ಆ ಕೃಷಿಹೊಂಡ ಆಶ್ರೀತ ಬೆಳೆ ಕಾಣುತ್ತದೆ. ಇದರಲ್ಲಿ ಸೊಟಕನಹಾಳ ಗ್ರಾಮದ ರೈತ ವೆಂಕರಡ್ಡಿ ಚಿಕ್ಕನರಗುಂದ ಸಹ ಒಬ್ಬರಾಗಿ ಮೂರು ಎಕರೆ ಹೊಲದಲ್ಲಿ 3 ಲಕ್ಷ ಆದಾಯ ಗಳಿಸಿದ್ದಾರೆ.
ರೈತ ವೆಂಕರಡ್ಡಿ ತಮ್ಮ 3 ಎಕರೆ ಹೊಲಕ್ಕೆ ಹೊಂದುವಂತೆ 80/90 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಹೆಸರು, ಗೋವಿನಜೋಳ, ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ ಬೆಳೆ ಬೆಳೆದು ಕೃಷಿಯಲ್ಲೇ ಹೊಸ ಆದಾಯ ತರುವ ಕನಸುಗಳನ್ನು ಒಂದೊಂದಾಗಿ ನನಸು ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಹೆಸರು ಬೆಳೆಯ ಆದಾಯ ಆನಂದ ತಮ್ಮದಾಗಿಸಿಕೊಂಡ ರೈತ ವೆಂಕರಡ್ಡಿ. ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ಮೂಲಕವೇ ಇಷ್ಟು ಆದಾಯ ಗಳಿಕೆ ಸಾಧ್ಯವಾಯ್ತು ಇಲ್ಲವಾದಲ್ಲಿ ಒಣ ಬೇಸಾಯದ ಮೂಲಕ ವಾರ್ಷಿಕ 50 ಸಾವಿರ ರೂಪಾಯಿ ಗಳಿಸೋದು ಕಷ್ಟವಾಗಿತ್ತು ಎನ್ನುತ್ತಾರೆ.
ಒಟ್ಟಿನಲ್ಲಿ ರೈತಾಪಿ ಜನರಿಗೆ ಸಮರ್ಪಕ ಸೌಲಭ್ಯ, ಕೃಷಿ ಪರಿಕರಗಳ ಜೊತೆ ಜೀವಜಲ ಕೈ ಹಿಡಿದ್ರೇ, ಶ್ರಮದ ಬದುಕಿನಲ್ಲಿ ಎಂತಹ ಸಾಧನೆಯನ್ನು ಬೇಕಾದ್ರೂ ಮಾಡಬಹುದು ಎಂಬುದಕ್ಕೆ ತಮ್ಮ ಬೇಸಾಯದ ಬದುಕಲ್ಲಿ ಪ್ರತ್ಯಕ್ಷವಾಗಿ ಮಾಡಿ ತೋರಿಸಿದ್ದಾರೆ.
Kshetra Samachara
26/10/2021 02:44 pm