ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕು ಅತಿ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿದೆ. ಪ್ರಮುಖವಾಗಿ, ಶಿರಹಟ್ಟಿ ತಾಲೂಕು ಕೃಷಿ ಪ್ರಧಾನವಾದ ಪ್ರದೇಶವಾಗಿರುದರಿಂದ. ಕೃಷಿ ಜೊತೆಗೆ ತೋಟಗಾರಿಕೆ, ಮುಂತಾದ ಉಪಕಸಬುಗಳಲ್ಲಿ ರೈತರು ತೊಡಗಿಕೊಂಡಿದ್ದಾರೆ.
ಮಳೆಯ ಅನಿಶ್ಚಿತತೆ, ಅಂತರ್ಜಲದ ಕುಸಿತದಿಂದ ಕೊಳವೆ ಬಾವಿಗಳಲ್ಲಿರುವ ನೀರು ಹಂಗಾಮಿನಿಂದ ಹಂಗಾಮಿಗೆ ಕಡಿಮೆಯಾಗಿ ಬೆಳೆಗಳಿಗೆ ನೀರುಣಿಸುವುದು ದುಸ್ಥರವಾಗಿದೆ. ಇಂತಹ ಸಂದರ್ಭಗಳಲ್ಲಿ ಶಿರಹಟ್ಟಿ ತಾಲೂಕಿನ ಶಿವಾಜಿನಗರದ ಯುವ ರೈತ ಕುಮಾರ ನೀಲಪ್ಪ ಲಮಾಣಿ ಕೃಷಿಯ ಜೊತೆಗೆ, ತೋಟಗಾರಿಕೆ ಹೈನುಗಾರಿಕೆ, ಮೀನುಗಾರಿಕೆ, ಅರಣ್ಯ ಕೃಷಿ ಮುಂತಾದ ವೈವಿಧ್ಯಮಯ ಉಪ ಕಸಬುಗಳಲ್ಲಿ ತೊಡಗಿಸಿಕೊಂಡು ಸಂತೃಪ್ತಿಯ ಜೀವನ ಸಾಗಿಸುತ್ತ ಇತರರಿಗೆ ಮಾದರಿಯಾಗಿದ್ದಾರೆ.
ತಂದೆಯ ಅಕಾಲಿಕ ಮರಣದಿಂದಾಗಿ ಇಡೀ ಕುಟುಂಬಕ್ಕೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಆ ಸಮಯದಲ್ಲಿ ಅಕ್ಷರಶಃ ಜೀವನಕ್ಕೆ ಭೂಮಿಯೇ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲೂ ಕುಮಾರ ಲಮಾಣಿ ಎದೆಗುಂದದೆ ತಮ್ಮ ಜೊತೆಗೆ ತಾಯಿ, ಇಬ್ಬರು ತಮ್ಮಂದಿರ ದುಡಿಮೆಯಿಂದ 2005 ರಲ್ಲಿ 3 ಎಕರೆ 20 ಗುಂಟೆ ಭೂಮಿಯನ್ನು ಖರೀದಿಸಿದರು. ಕೊಳವೆ ಕೊರೆಸಿ ವಿವಿಧ ಬೆಳೆಗಳನ್ನು ಬೆಳೆದು ಉಪಜೀವನವನ್ನು ಸಾಗಿಸುವದರ ಜೊತೆಗೆ ಕೃಷಿಯಿಂದ ಪಡೆದ ಲಾಭದಲ್ಲಿ ಮತ್ತೆ 3 ಎಕರೆ 20 ಗುಂಟೆ ಭೂಮಿಯನ್ನು ಖರೀದಿಸಿದ. ಒಂದು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ , ಅನ್ನದಾತ ಸ್ವ ಸಹಾಯ ಸಂಘ ರಚಿಸಿ ಸ್ವ ಉದ್ಯೋಗ ಕೈಗೊಳ್ಳಲು ಸಹಾಯಧನ ಕೊಡಿಸುತ್ತಿದ್ದರು, ಕೃಷಿ ಇಲಾಖೆಯ ಮುಖಾಂತರ ಕೃಷಿ ಹೊಂಡ, ಬದು ನಿರ್ಮಾಣ ಮುಂತಾದ ಜನಪರ ಕಾರ್ಯವನ್ನು ಅನುಷ್ಠಾನಗೊಳಿಸಲು ಇತರೆ ರೈತರಿಗೆ ನೆರವು ಕೊಡಸುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಕೃಷಿಯ ಆದಾಯ ದಿಂದ 1 ಎಕರೆ 14 ಗುಂಟೆ ಕ್ಷೇತ್ರವನ್ನು ಸ್ವತಃ ದುಡಿಮೆಯಿಂದಲೇ ಖರೀದಿಸಿ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಸಮಗ್ರ ಕೃಷಿಗೆ ಒತ್ತು ನೀಡುತ್ತಿದ್ದಾರೆ.
ಇವರು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಸುಸ್ಥಿರ ಆದಾಯವನ್ನು ಗಳಿಸುತ್ತಿದ್ದಾರೆ. ಕೃಷಿ ಬೆಳೆಗಳಾದ ಜೋಳ , ತೊಗರಿ, ಸೂರ್ಯಕಾಂತಿ, ಮೆನಸಿನಕಾಯಿ ಬೆಳೆದು 1,60,000 ದಷ್ಟು ನಿವ್ವಳ ಆದಾಯವನ್ನು ಗಳಿಸಿರುತ್ತಾರೆ. ಸುಧಾರಿತ ಬೇಸಾಯ ಪದ್ಧತಿಯಲ್ಲಿ ತರಕಾರಿ ಬೆಳೆಗಳು ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
Kshetra Samachara
17/10/2021 09:40 am