ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : 50 ವಸಂತ ಕಳೆದ ರೈತಾಪಿ ಬದುಕಿಗೆ ಹೊಸ ಆದಾಯ ಮಾರ್ಗ ತಂದ ಕೃಷಿಹೊಂಡ

ನರಗುಂದ : ತಮ್ಮ ಕೃಷಿ ಬದುಕಿನಲ್ಲಿ 50 ವಸಂತಗಳನ್ನು ಪೂರೈಸಿದ ರೈತನೊಬ್ಬ ಒಣ ಬೇಸಾಯದ ಭೂಮಿಯಲ್ಲಿ ಮಳೆ ಆಶ್ರಿತವಾಗಿ ಕಾಣದ ಆದಾಯವನ್ನು ಕೃಷಿಹೊಂಡ ನಿರ್ಮಾಣ ಕಾರ್ಯ ರೈತನ ಅದೃಷ್ಟ ಬದಲಿಸಿ ಕಡಿಮೆ ಶ್ರಮದಲ್ಲಿ ಹೆಚ್ಚಿನ ಆದಾಯದ ಮಾರ್ಗ ತೋರಿದೆ.

ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಈಗಾಗಲೇ ಜಾರಿಯಲ್ಲಿರುವ ಕೃಷಿಹೊಂಡ ನಿರ್ಮಾಣ ಯೋಜನೆ ಮೂಲಕ ತಮ್ಮ ಹೊಲದಲ್ಲಿ ನೂರು ನೂರು ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ರೈತ ಶಿವನಗೌಡ ಕರಿಗೌಡರ, ಈ ಬಾರಿ ತಮ್ಮ ಹೊಲದಲ್ಲಿ ಗೋವಿನಜೋಳ ಬೆಳೆ ಬೆಳೆದಿದ್ದು ಕೃಷಿ ಲಕ್ಷ್ಮೀ ಕೈ ಹಿಡಿಯುವ ನಿರೀಕ್ಷೆ ದುಪ್ಪಟ್ಟಾಗಿವೆ.

ತಮ್ಮ 4 ಏಕರೆ ಜಮೀನಿಗೆ ಒಣ ಬೇಸಾಯದಲ್ಲಿ ಕೈಯಲ್ಲಿದ್ದ ಹಣ ಭೂಮಿಗೆ ಹಾಕಿ ನಷ್ಟದ ಹಾದಿ ಸವೆಸಿ ಬರಿ ಲಕ್ಷ ರೂಪಾಯಿ ಗಟ್ಟಿಕ್ಕುವುದೇ ಕಷ್ಟವಾದ ದಿನ ಮರೆಸಿದ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣದ ಕೃಷಿಯಲ್ಲಿ ಈಗಾಗಲೇ ಮುಂಗಾರು ಗೋವಿನಜೋಳ ಹಾಗೂ ಹಿಂಗಾರು ಕಡಲೆ ಬೆಳೆ ತಾಳೆ ಹಾಕಿದ್ರೇ 3 ಲಕ್ಷ ನಿವ್ವಳ ಆದಾಯದ ದೃಷ್ಟಿಕೋನ ರೈತ ಶಿವನಗೌಡರನ್ನು ಗಟ್ಟಿಯಾಗಿ‌ಸಿದೆ.

ಭೂತಾಯಿಯ ಮಡಿಲಿಗೆ ಯಾವಾಗ ಬೇಕು ಆಗ ನೀರು ನೀಡಿ, ಮಳೆ ದೂರವಾದ್ರೂ ಕೃಷಿಹೊಂಡ ಹತ್ತಿರವಾಗಿ ರೈತ ಶಿವನಗೌಡರ 4 ಏಕರೆ ಹೊಲದಲ್ಲಿ ಹೊನ್ನಿನ ಫಲ ಹುಲುಸಾಗಿ ಬೆಳೆದು ಕಷ್ಟದ ಬದುಕಿಗೆ ಕೃಷಿಹೊಂಡ ನಿರ್ಮಾಣದ ನಿರ್ಧಾರ ಸಾರ್ಥಕ ಎನಿಸಿದೆ.

ಒಟ್ಟಾರೆ ಅಂತರ್ಜಲದ ಮಟ್ಟ ಕುಸಿದು ಒಣ ಬೇಸಾಯದ ದಿನಗಳಲ್ಲಿ ವರುಣನ ದಾರಿ ಕಾಯುವ ರೈತರೀಗ ಕೃಷಿಹೊಂಡ ಆಶ್ರೀತ ಕೃಷಿಯ ಮೂಲಕ ಗೆಲುವು ಕಂಡಿದ್ದಾರೆ.

Edited By : Shivu K
Kshetra Samachara

Kshetra Samachara

28/09/2021 11:41 am

Cinque Terre

55.47 K

Cinque Terre

1

ಸಂಬಂಧಿತ ಸುದ್ದಿ