ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಗ್ರ ಕೃಷಿಯಲ್ಲಿ ಚಿನ್ನದಂತ ಬೆಳೆ ಬೆಳೆಯುತ್ತಿರುವ ಸುಮಿತ್ರಾ

ವ್ಯವಸಾಯದಲ್ಲಿ ಪುರುಷರು ಮಾತ್ರ ದುಡಿಯುವುದು ಕಂಡು ಬರುತ್ತದೆ. ನಮ್ಮ ಮಹಿಳೆಯರು ಕೂಡಾ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರೀತ್ಯದಿಂದಾಗಿ ಕೃಷಿಕರಿಗೆ ನಿರೀಕ್ಷೆಗೆ ತಕ್ಕಷ್ಟು ಆದಾಯ ಸಿಗುವುದು ಕನಸಿನ ಮಾತಾಗಿದೆ. ಬೆಳೆ ತೆನೆಹಿಡಿಯುವ ಟೈಮ್ ನಲ್ಲಿ ಮಳೆ ಕೈ ಕೊಡುವುದರಿಂದ ಅನ್ನದಾತರು ಕಂಗಾಲಾಗುತ್ತಿದ್ದಾರೆ. ಆದ್ರೆ ಉತ್ತರ ಕರ್ನಾಟಕದಲ್ಲಿ ದೇಶಪಾಂಡೆ ಫೌಂಡೇಶನ್ ಅನ್ನದಾತರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ.

ಹೌದು ಕೃಷಿಗೆ ಅನುಕೂಲವಾಗುವಂತಹ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವುದರ ಮೂಲಕ ಅನ್ನದಾತರಿಗೆ ಆಸರೆಯಾಗಿದೆ. ಸದ್ಯ ಕೃಷಿಹೊಂಡ ನಿರ್ಮಿಸಿಕೊಂಡು ಮಿಶ್ರ ಬೆಳೆ ಬೆಳೆದ ಛಲಗಾತಿ ರೈತ ಮಹಿಳೆಯ ಬಗ್ಗೆ ಇಂದಿನ ದೇಶ್ ಕೃಷಿಯಲ್ಲಿ ತಿಳಿಯೋಣ ಬನ್ನಿ..

Edited By : Shivu K
Kshetra Samachara

Kshetra Samachara

25/08/2021 02:11 pm

Cinque Terre

30.07 K

Cinque Terre

0

ಸಂಬಂಧಿತ ಸುದ್ದಿ