ಬಂಡಾಯದ ನಾಡು ನರಗುಂದದ ಭಾಗದಲ್ಲಿ ನೀರಿನ ಅಭಾವ ಸಾಮಾನ್ಯ ಕಾಲಕ್ರಮೇಣ, ಕುಡಿಯುವ ನೀರಿನ ಹಾಹಾಕಾರ ತಗ್ಗುತ್ತಿದೆ. ಆದ್ರೆ ಕೃಷಿಗೆ ಬೇಕಾದ ನೀರಿನ ಮೂಲವಿಲ್ಲ.
ಇಲ್ಲಿನ ರೈತರಿಗೆ ಉತ್ತಮ ಇಳುವರಿಯ ಬೆಳೆ ಬೆಳೆಯಬೇಕು ಎನ್ನುವ ಛಲವಿದ್ದರೂ, ನೀರಿನ ಕೊರತೆಯಿಂದ ಒಳ್ಳೆಯ ಫಸಲು ಕಾಣುವುದು ಕಷ್ಟವಾಗಿತ್ತು. ಈ ಸಂದಿಗ್ಧತೆಯನ್ನು ಅರಿತು ದೇಶಪಾಂಡೆ ಫೌಂಡೇಶನ್, ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಮೂಲಕ ಅನ್ನದಾತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಬನ್ನಿ ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಹೊಂಡದ ನೀರು ಬಳಸಿಕೊಂಡು ಉತ್ತಮ ಇಳುವರಿಯೊಂದಿಗೆ ಉತ್ತಮ ಬೆಳೆ ಬೆಳೆದ ರೈತನ ಬಗ್ಗೆ ತಿಳಿಯೋಣ.
Kshetra Samachara
24/08/2021 02:12 pm