ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರಸಗೊಬ್ಬರ ಸರಿಯಾಗಿ ವಿತರಿಸುವಂತೆ ರೈತರ ಆಗ್ರಹ

ಕಲಘಟಗಿ: ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ ರಸಗೊಬ್ಬರವನ್ನು ಸರಿಯಾಗಿ ವಿತರಿಸುವಂತೆ ರೈತರು ಆಗ್ರಹಿಸಿದರು.

ಮಂಗಳವಾರ ಸಂತೆ ದಿನವಾಗಿದ್ದರಿಂದ ರಸಗೊಬ್ಬರ ಪಡೆಯಲು ಗ್ರಾಮೀಣ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.ರಸಗೊಬ್ಬರ ಕೊಳ್ಳಲು ಚೀಟಿ ನೀಡಿದ್ದು,ತಿಂಗಳುಗಟ್ಟಲೇ ಕಾಯ ಬೇಕಾಗಿದ್ದು,ಗೊಬ್ಬರ ತೆಗೆದುಕೊಳ್ಳಲು ಬಂದರೆ ಗೊಬ್ಬರ ಇಲ್ಲ ಎನ್ನಲಾಗುತ್ತಿದೆ.

ಹತ್ತು ಚೀಲದ ರಸೀದಿ ನೀಡಿ,ಐದು ಚೀಲದ ಹಣ ಪಡೆದು ಐದು ಚೀಲ ಗೊಬ್ಬರ ಮಾತ್ರ ನೀಡುತ್ತಾರೆ ಹಾಗೂ ಹೆಚ್ಚುವರಿಯಾಗಿ ಜಿಂಕ್ ಕೊಂಡರೆ ಮಾತ್ರ ರಸಗೊಬ್ಬರ ನೀಡುವುದಾಗಿ ಹೇಳುತ್ತಾರೆ ಎಂದು ರೈತರು ಆರೋಪಿಸಿದರು.ಟಿಎಪಿಸಿಎಂಎಸ್ ಸಿಬ್ಬಂದಿಗೆ ಹಾಗೂ ರೈತರಿಗೆ ಮಾತಿನ ಚಕಮಕಿ ನಡೆಯಿತು.ರಸಗೊಬ್ಬರ ನೀಡುವುದಾಗಿ ತಿಳಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತು.

Edited By : Nagesh Gaonkar
Kshetra Samachara

Kshetra Samachara

03/08/2021 10:42 pm

Cinque Terre

59.79 K

Cinque Terre

2

ಸಂಬಂಧಿತ ಸುದ್ದಿ