ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಿರ್ಲಾಪುರದಲ್ಲಿ 'ಕೃಷಿ ಸಾಧನೆ'ಯ ನಿನಾದ

ನವಲಗುಂದ : ಇತ್ತೀಚೆಗೆ ಕೃಷಿ ಎಂದರೆ ಸಾಕು ಒಕ್ಕಲು ಸಮಸ್ಯೆ, ಸಾಲದಂತಹ ಸಮಸ್ಯೆ ಎಂದು ತಿಳಿದು, ನಗರಕ್ಕೆ ಹೋಗಿ ಖಾಸಗಿ ಕಂಪನಿಗಳಲ್ಲಿ ದುಡಿಯುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಕೃಷಿಯಲ್ಲಿ ಬಾಳಿನ ಸಾರ್ಥಕತೆ ಕಾಣುತ್ತಾ, ಇತರರನ್ನೂ ಈ ದಾರಿಯಲ್ಲಿ ಕೊಂಡೊಯ್ಯುವ ಸಾಧಕರು ನಮ್ಮ ನಡುವೆಯೇ ಇದ್ದಾರೆ.

ಹೀಗೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ರೈತ ಮಂಜುನಾಥ ದೊಡಮನಿ ಅವರು ಕೃಷಿಯಲ್ಲಿ ಸಾಧನೆಯ ನಿನಾದ ಹೊರಡಿಸುತ್ತಿದ್ದಾರೆ. ಅವರ ಈ ಸಾಧನೆಗೆ ದೇಶಪಾಂಡೆ ಫೌಂಡೇಶನ್ ಸಾಥ್ ನೀಡುತ್ತಿರುವುದು ಗಮನಾರ್ಹ ಸಂಗತಿ. ಬಿಎ ಪದವೀಧರರಾಗಿರುವ ಮಂಜುನಾಥ ಅವರು ಇಂದು ಅನೇಕರಿಗೆ ಮಾದರಿಯಾಗಿದ್ದು, ಯುವ ಹಾಗೂ ಉತ್ಸಾಹಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಮಂಜುನಾಥ ಅವರು ಕೃಷಿಹೊಂಡ ನಿರ್ಮಾಣಕ್ಕೂ ಮುನ್ನ ಹೆಸರು, ಗೋದಿ ಹಾಗೂ ಕಡಲಿ ಬೆಳೆಯುತ್ತಿದ್ದರು. ಆದರೆ ಕೃಷಿಹೊಂಡ ನಿರ್ಮಾಣದ ಬಳಿಕ ಮೊದಲಿನ ಬೆಳೆಗಳ ಜೊತೆಗೆ ಮೆಣಸಿನಕಾಯಿ, ಈರುಳ್ಳಿ, ಹತ್ತಿ, ಶೇಂಗಾ ಹಾಗೂ ಜೋಳ ಬೆಳೆಯುತ್ತಿದ್ದಾರೆ. ಹೀಗಾಗಿ ಅವರ ಆದಾಯದಲ್ಲಿ ದ್ವಿಗುಣವಾಗಿದೆ. ಈ ಬಗ್ಗೆ ಮಂಜುನಾಥ ಅವರು ಏನು ಹೇಳುತ್ತಾರೆ ಅಂತ ನೀವೇ ಕೇಳಿ ನೋಡಿ.

ಒಟ್ಟಿನಲ್ಲಿ ಕೃಷಿಯಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟ ಕಷ್ಟ ಎಂಬ ಮಾತು ಸುಳ್ಳು ಎನ್ನುವುದನ್ನು ಮಂಜುನಾಥ ಅವರಂತ ಸಾವಿರಾರು ರೈತರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಅನೇಕರ ಕೃಷಿ ಬದುಕಿಗೆ ಬೆಳಕಾಗುತ್ತಿರುವ ಕೃಷಿ ಸಾಧಕರಿಗೆ ಶುಭ ಹಾರೈಸೋಣ.. ಜೈ ಜವಾನ್, ಜೈ ಕಿಸಾನ್..

Edited By : Manjunath H D
Kshetra Samachara

Kshetra Samachara

17/02/2021 08:39 pm

Cinque Terre

65.13 K

Cinque Terre

1

ಸಂಬಂಧಿತ ಸುದ್ದಿ