ವರದಿ : ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಕುಂದಗೋಳ : ಅತಿವೃಷ್ಟಿ ನಡುವೆಯ ರೈತರು ಕಷ್ಟ ಪಟ್ಟು ಬೆಳೆದ ಹೆಸರು ಬೆಳೆಗೆ ಸರ್ಕಾರ ಈಗಾಗಲೇ 7196 ರೂಪಾಯಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಪಕ್ರೀಯೆ ಆರಂಭ ಮಾಡಿ ರೈತರಿಂದ ಅರ್ಜಿ ಕಲೆ ಹಾಕುತ್ತಿದೆ. ಆದರೂ ರೈತರಿಗೆ ಈ ಯೋಜನೆ ಸಮರ್ಪಕವಾಗದೆ ಪೇಚು ಮೋರೆ ಹಾಕುತ್ತಿದ್ದಾರೆ.
ಹೌದು ! ಸರ್ಕಾರವೇನು ಹೆಸರು ಬೆಳೆ ಖರೀದಿ ಪ್ರಕ್ರಿಯೆ ಆರಂಭ ಮಾಡಿದೆ ಆದ್ರೆ ಒಂದು ಖಾತೆಗೆ ಕೇವಲ 4 ಕ್ವಿಂಟಾಲ್ ಖರೀದಿ ಮಾತ್ರ ರೈತರಿಗೆ ಅಸಮಾಧಾನ ತಂದೊಡ್ಡಿದೆ.
ಕಾರಣ ರೈತರು 4 ಕ್ವಿಂಟಾಲ್ ಗಿಂತ ಅಧಿಕ ಹೆಸರು ಬೆಳೆದಿದ್ದು ಸರ್ಕಾರ ಕೇವಲ 4 ಕ್ವಿಂಟಾಲ್ ಖರೀದಿ ಮಾಡಿದ್ರೆ ಉಳಿದ ಹೆಸರ ಬೆಳೆ ನಾವು ಏನು ಮಾಡೋಣ ? ಮಾರುಕಟ್ಟೆಗೆ ಹೋದ್ರೆ ಕೇವಲ 4 ಸಾವಿರ 5 ಸಾವಿರ ಕೇಳ್ತಾರೆ ಇಲ್ಲಿ ಸರ್ಕಾರ ಉತ್ತಮ ಬೆಲೆ ನೀಡುತ್ತಿದೆ ಕನಿಷ್ಠ ಪಕ್ಷ ಒಂದು ಖಾತೆಗೆ 15 ಕ್ವಿಂಟಾಲ್ ಹೆಸರು ಖರೀದಿ ಮಾಡಿ ಎನ್ನುತ್ತಿದ್ದಾರೆ.
ಈ ಬಗ್ಗೆ ಸರ್ಕಾರದಿಂದ ಟೆಂಡರ್ ಪಡೆದ ಮಾರ್ಕೆಟಿಂಗ್ ಪೆಡರೇಷನ್ ದವರು ಈಗ ಸರ್ಕಾರ ನೀಡಿದ ಪ್ರಮಾಣದಂತೆ ಪಟ್ಟಣದ ಎಪಿಎಂಸಿಯಲ್ಲಿ ಹೆಸರು ಖರೀದಿ ಅರ್ಜಿ ಪ್ರಕ್ರಿಯೆ ಕೈಗೊಂಡಿದ್ದು ಸರ್ಕಾರ ಹೆಚ್ಚು ಖರೀದಿ ಮಾಡಲು ತಿಳಿಸಿದ್ರೆ ಖಂಡಿತ ಪ್ರಮಾಣ ಹೆಚ್ಚಿಗೆ ಮಾಡ್ತಿವಿ ಅಂತಾರೆ.
ಇದೆಲ್ಲದೆ ರೈತರು ಹೆಸರು ಬೆಳೆ ಜೊತೆ ಉದ್ದು ಖರೀದಿ ಮಾಡಿ ಎಂದು ಮನವಿ ಮಾಡುತ್ತಿದ್ದು ರೈತರ ಬಯಕೆ ಎಷ್ಟರ ಮಟ್ಟಿಗೆ ಈಡೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
25/09/2020 04:34 pm