ಕಲಘಟಗಿ:ಈ ಸಾರಿ ಮಳೆ ಅತೀಯಾಗಿ,ಹೊಲದಾಗ ಹಾಕಿದ ಸೋಯಾಬೀನದಾಗ ಒಂದು ಕಾಳ ಸಿಗದಂಗ ಆಗೈತಿ ನೋಡರಿ.
ಹೌದು ! ಇದು ತಾಲೂಕಿನಲ್ಲಿ ಸೋಯಾ ಬೆಳೆಯನ್ನು ಬೆಳೆದ ರೈತರ ಬೇಸರದ ಮಾತುಗಳಿವು,ತಾಲೂಕಿನಾದ್ಯಂತ ಸುರಿದ ಅತೀಯಾದ ಮಳೆ ಈಗ ನಿಂತಿದೆ,ಆದರೆ ಮಳೆ ನಿಂತ ಮೇಲೆ ರೈತರ ಕಣ್ಣಿರು ಹಾಕುವಂತಾಗಿದೆ.
ಅತೀಯಾದ ಮಳೆ ತಾಲೂಕಿನಲ್ಲಿ ಸೃಷ್ಟಿಸಿದ ಅವಾಂತರಿಂದ,ಸೋಯಾ ಬೆಳೆಹಾನಿಯಾಗಿ,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸೋಯಾ ಬೆಳೆಗೆ ಮಾಡಿದ ಖರ್ಚು ಬರದಂಗ ಆಗಿದೆ,ಮಳೆಗೆ ಸೋಯಾ ಹೊಲದಲ್ಲಿಯೇ ಕೊಳೆತು ಹೋಗಿದೆ ಇದನ್ನು ಕಿಳಸಾಕ ಹಚ್ಚಿದ ಆಳಿನ ಕೂಲಿಯೂ ಮೈಮೇಲೆ ಆಗುತ್ತಿದೆ ಎಂದು ಸೋಯಾ ಬೆಳೆದ ರೈತ ಶಂಕರಗೌಡ ಬಾವಿಕಟ್ಟಿ ಸಂಕಷ್ಟವನ್ನು ಪಬ್ಲಿಕ್ ನೆಕ್ಸ್ಟ್ ಗೆ ವಿವರಿಸಿದರು.
ಸಾಲ ಮಾಡಿ ರೈತರು ಈ ಸಾರಿ ಬೆಳೆ ಬೆಳೆದಿದ್ದರು ಆದರೆ ಮಳೆಯಿಂದ ಸೋಯಾ ಹಾಳಾಗಿ ರೈತರು ಆರ್ಥಿಕ ಹಾನಿ ಅನುಭವಿಸಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
Kshetra Samachara
04/10/2020 06:53 pm