ಕುಂದಗೋಳ : ರೈತರು ಕೃಷಿ ಸಂಬಂಧಿತ ಯಾವುದೇ ಸರ್ಕಾರಿ ಇಲಾಖೆಗಳ ಬಗ್ಗೆ ಗೊಂದಲ ಹಾಗೂ ಸಮಸ್ಯೆಗಳಿದ್ದಲ್ಲಿ ಪ್ರತಿ ತಿಂಗಳ ಒಂದನೆ ಮತ್ತು ಮೂರನೇ ಸೋಮವಾರ ರೈತ ಸಂಪರ್ಕ ಕೇಂದ್ರಗಳಲ್ಲಿ ನಡೆಯುವ ರೈತ ಸಭೆಯಲ್ಲಿ ಭಾಗವಹಿಸಿ ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದು ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ್ ಹೇಳಿದರು.
ಅವರು ಪಟ್ಟಣದ ರೈತ ಇಲಾಖೆಯಲ್ಲಿ ನಡೆದ ಸಂಪರ್ಕ ಕೇಂದ್ರಗಳನ್ನು ಕ್ರಿಯಾಶೀಲ ನೋಡಲ್ ಕೇಂದ್ರಗಳಾಗಿ ಬಲ ಪಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆ ವೈದ್ಯರು ಭಾಗವಹಿಸಿ ತಮ್ಮ ಇಲಾಖೆ ಪರವಾಗಿ ರೈತರಿಗೆ ಇರುವಂತಹ ಸೌಲಭ್ಯಗಳು ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣ ಹಾಗೂ ತಾಲೂಕಿನ ರೈತರು ಹಾಗೂ ಕೃಷಿ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
07/12/2020 03:13 pm