ನವಲಗುಂದ : ಕಳಸಾ ಬಂಡೂರಿ ಮಹದಾಯಿ ತೀರ್ಪು ಬಂದು ಒಂದೂವರೆ ವರ್ಷ ಕಳೆದರು ಇದುವರೆಗೆ ಕಾಮಗಾರಿ ಆರಂಭವಾಗಿಲ್ಲಾ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭ ಮಾಡವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಮತ್ತು ಪಕ್ಷಾತೀತ ರೈತ ಹೋರಾಟ ಸಮಿತಿ ವತಿಯಿಂದ ನವಲಗುಂದ ತಹಸೀಲ್ದಾರ್ ಅವರಿಗೆ ಮನವಿಯನ್ನು ನೀಡಲಾಯಿತು.
ಕಳಸಾ ಬಂಡೂರಿ ಮಹದಾಯಿ ಕಾಮಗಾರಿಯನ್ನು ಸಚಿವ ಸಂಪುಟದಲ್ಲಿ ಸಭೆ ನಡೆಸಿ ತುರ್ತು ನಿರ್ಧಾರ ಕೈಗೊಂಡು ಆರಂಭ ಮಾಡಬೇಕು, 15 ದಿನದೊಳಗೆ ಗೋವಿನ ಜೋಳ ಬೆಂಬಲ ಬೆಲೆಯಲ್ಲಿ ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಬೇಕು, ಅತಿವೃಷ್ಟಿ ಪರಿಹಾರ ಬಿಡುಗಡೆಯದರೂ ರೈತನ ಖಾತೆಗೆ ಇದುವರೆಗೂ ಜಮೆ ಆಗಿಲ್ಲಾ, ತಕ್ಷಣ ಜಮಾ ಮಾಡಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಈ ವೇಳೆ ಅಧ್ಯಕ್ಷರಾದ ಸಿದ್ದಪ್ಪ, ಸುಭಾಸ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ್, ರವಿಗೌಡ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
Kshetra Samachara
02/12/2020 01:15 pm