ಆರೋಗ್ಯ ಪರಿಣಿತರು (Health Experts) ಹೇಳುವುದನ್ನು ನಂಬುವುದಾದರೆ ಮುಂದಿನ ಎರಡು ದಶಕಗಳ ಸಮಯದಲ್ಲಿ ಭಾರತದಲ್ಲಿ ಪಾರ್ಕಿನ್ಸನ್ (Parkinson’s) ಕಾಯಿಲೆಯ ಪ್ರಮಾಣವು ಏನಿಲ್ಲವೆಂದರೂ 200-300% ಹೆಚ್ಚಳವಾಗಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯಲ್ಲಿ (Manipal Hospital) ಪಾರ್ಕಿನ್ಸನ್ ಕಾಯಿಲೆಯ ತಜ್ಞರಾಗಿರುವ ಡಾ. ಪ್ರಶಾಂತ್ ಎಲ್.ಕೆ (Prashanth ) ಅವರು "ಸ್ವಲ್ಪ ಸಮಯದ ಹಿಂದಷ್ಟೇ ಪಾರ್ಕಿನ್ಸನ್ ಕಾಯಿಲೆ ಎಂಬುದು ಹೆಚ್ಚಾಗಿ ಪಾಶ್ಚಿಮಾತ್ಯರಲ್ಲಿ ಕಂಡು ಬರುವ ಕಾಯಿಲೆ ಎಂಬ ಧೋರಣೆ ನಮ್ಮಲ್ಲಿ ಸಾಮಾನ್ಯವಾಗಿತ್ತು. ಆದರೆ ಕಳೆದ ಎರಡು ದಶಕಗಳನ್ನು ಅಭ್ಯಸಿಸಿದಾಗ ಈ ಕಾಯಿಲೆಯು ಭಾರತದಲ್ಲಿ ಪ್ರತಿ ಲಕ್ಷ ಜನರಲ್ಲಿ ಸುಮಾರು 300-400 ಜನರಲ್ಲಿ ಕಂಡುಬಂದಿರುವುದಾಗಿ ತಿಳಿದುಬಂದಿದೆ" ಎಂದಿದ್ದಾರೆ.
ಪಾರ್ಕಿನ್ಸನ್ ಕಾಯಿಲೆ ಪ್ರಕರಣಗಳ ಹೆಚ್ಚಳ
ಹಾಗೂ, "ಕಳೆದ ಕೆಲವು ವರ್ಷಗಳಲ್ಲಿ ಪಾರ್ಕಿನ್ಸನ್ ಕಾಯಿಲೆ ಪ್ರಕರಣಗಳ ಸಂಖ್ಯೆಯು ಬೆಂಗಳೂರಿನಲ್ಲಿ ಸಾಕಷ್ಟು ಹೆಚ್ಚಳವನ್ನು ಕಂಡಿದೆ. ಅದರಲ್ಲೂ ವಿಶೇಷವಾಗಿ ಮೂವ್ಮೆಂಟ್ ಡಿಸಾರ್ಡರ್‌ಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಚಿಕಿತ್ಸೆ ನೀಡಲಾಗುವ ಕ್ಲಿನಿಕ್‌ಗಳಲ್ಲಿ ಈ ಪ್ರಕರಣಗಳು ಹೆಚ್ಚು ದಾಖಲಾಗಿವೆ" ಎಂದು ಅವರು ಹೇಳುತ್ತಾರೆ.
ಇತ್ತೀಚಿಗಷ್ಟೆ, ಮೂವ್ಮೆಂಟ್ ಡಿಸಾರ್ಡರ್‌ಗಳಿಗೆ ಸಂಬಂಧಿಸಿದಂತೆ ದೇಶದ ಮೂರು ಮಹಾನಗರಗಳಾದ ಮುಂಬೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು ಅದನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಇಂತಹ ಕ್ಲಿನಿಕ್‌ಗಳಿಗೆ ಭೇಟಿ ನೀಡಿರುವ ಒಟ್ಟು ರೋಗಿಗಳ ಪೈಕಿ 65% ರಷ್ಟು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಅಂಶವು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಡಾ. ಪ್ರಶಾಂತ್ ಹೇಳುವಂತೆ ಈ ಆರೋಗ್ಯದ ಸ್ಥಿತಿಯು ಸಾಮಾನ್ಯವಾಗಿ ಅಟೆಕ್ಸಿಯಾ, ಖಾರಿಯಾ, ಟ್ರೆಮರ್ಸ್, ಗೈಟ್ ಡಿಸಾರ್ಡರ್ಸ್, ರೆಸ್ಟ್‌ಲೆಸ್ ಲೆಗ್ ಸಿಂಡ್ರೋಮ್, ಬ್ಯಾಲಿಸ್ಟಿಕ್ ಡಿಸಾರ್ಡರ್ಸ್ ಇತ್ಯಾದಿ ಹೊಂದಿರುತ್ತವೆ. ಅವರು ಹೇಳುವಂತೆ ಈ ರೀತಿಯ ಅನಾರೋಗ್ಯಕರ ಪರಿಸ್ಥಿತಿಗೆ ತುತ್ತಾಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿರುವ ರೋಗಿಗಳು ಹೆಚ್ಚಾಗಿ 40 ವರ್ಷದೊಳಗಿನ ಪ್ರಾಯದವರಾಗಿದ್ದಾರೆ.
ಕಳಪೆ ಮಟ್ಟದ ಜೀವನಶೈಲಿ ಕಾರಣ
ಈ ಕಾಯಿಲೆ ಬರಲು ಕಾರಣಗಳು ಏನು ಎಂಬುದರ ಬಗ್ಗೆ ಪ್ರಶಾಂತ್ ಅವರು ಹೇಳುವ ಪ್ರಕಾರ, ಇಂದಿನ ರಭಸದ ಕಾಲದಲ್ಲಿ ರೂಪಿಸಿಕೊಂಡ ಕಳಪೆ ಮಟ್ಟದ ಜೀವನಶೈಲಿ, ಅನುವಂಶಿಕತೆ, ಒತ್ತಡ ಮುಂತಾದವುಗಳಾಗಿವೆ. ಪರಿಣಿತರು ಹೇಳುವಂತೆ ರ್‍ಯಾಪಿಡ್ ಐ ಮೂವ್ಮೆಂಟ್ ಹಾಗೂ ನಿದ್ರಾಹೀನತೆಯು ಸಹ ಈಗ ಎಲ್ಲೆಡೆ ಹೆಚ್ಚಳವಾಗುತ್ತಿದ್ದು, ಮುಂದೆ ಅದು ಪಾರ್ಕಿನ್ಸನ್ ಕಾಯಿಲೆಯಾಗಿ ರೂಪಗೊಳ್ಳುಬಹುದು ಎನ್ನುತ್ತಾರೆ.
ನರಶಸ್ತ್ರಚಿಕಿತ್ಸೆಯ ಸಲಹೆಗಾರ ಡಾ. ಸಾಥ್ವಿಕ್ ಆರ್ ಶೆಟ್ಟಿ ಅವರು ಹೇಳುವ ಪ್ರಕಾರ, ರ್‍ಯಾಪಿಡ್ ಐ ಮೂವ್ಮೆಂಟ್ ಎಂಬುದು ನಿದ್ರಾಸ್ಥಿತಿ ಬಗ್ಗೆ ಅಭ್ಯಸಿಸುವಾಗ ಪುನರಾವರ್ತಿತವಾಗುವ ಸ್ವಪ್ನದ ನಡುವಳಿಕೆಗೆ ಸಂಬಂಧಿಸಿದೆ. ಇದು ನ್ಯೂರೋ ಡೀಜನರೇಟಿವ್ ಡಿಸಾರ್ಡರ್‌ಗಳಾದ ಪಾರ್ಕಿನ್ಸನ್, ಡಿಮೆನ್ಷಿಯಾ, ಹಾಗೂ ಮಲ್ಟಿಪಲ್ ಸಿಸ್ಟಮ್ ಅಟ್ರೊಫಿ ಸ್ಥಿತಿಗಳ ಪೂರ್ವಾಗ್ರಹವಾಗಿಯೂ ಕಂಡುಬರುತ್ತದೆ. ಸಾಮಾನ್ಯವಾಗಿ ಆರ್‌ಬಿಡಿ ಎಂಬುದು 0.5% ರಷ್ಟು ಜನರಿಗೆ ಬರುತ್ತದೆ ಮತ್ತು ಅದರಿಂದಾಗಿ 70-80% ರಷ್ಟು ಜನರು ಹತ್ತು ವರ್ಷಗಳ ಅವಧಿಯಲ್ಲಿ ಪಾರ್ಕಿನ್ಸನ್ ಕಾಯಿಲೆಗೆ ಒಳಪಡಬಹುದು ಎನ್ನುತ್ತಾರೆ ಡಾ. ಶೆಟ್ಟಿ.
ರ್‍ಯಾಪಿಡ್ ಐ ಮೂವ್ಮೆಂಟ್
ಆಸ್ಟರ್ ಆರ್ವಿ ಆಸ್ಪತ್ರೆಯ ನರಶಾಸ್ತ್ರ ವಿಭಾಗದ ವೈದ್ಯರಾದ ಡಾ. ಶ್ರೀಕಂಠ ಸ್ವಾಮಿ ಅವರ ಪ್ರಕಾರ, ಪಾರ್ಕಿನ್ಸನ್ ಕಾಯಿಲೆ ಹೊಂದಿರುವವರಲ್ಲಿ ರ್‍ಯಾಪಿಡ್ ಐ ಮೂವ್ಮೆಂಟ್ ಅನ್ನುವುದು ಸಾಮಾನ್ಯ, ಇದು ಈ ಕಾಯಿಲೆ ಬರುವುದಕ್ಕಿಂತ ಹಲವು ವರ್ಷಗಳ ಮುಂಚೆಯೇ ಆರಂಭವಾಗಬಹುದು ಎನ್ನುತ್ತಾರೆ. ಇದರಿಂದ ಬಳಲುವವರು ಮಲಗಿದ್ದಾಗ ಅಪಾರವಾದ ಮಟ್ಟದಲ್ಲಿ ಕೈಕಾಲುಗಳನ್ನು ಚಲಿಸುತ್ತಾರೆ ಹಾಗೂ ಇದರಿಂದಾಗಿ ಅವರು ಉತ್ತಮ ಪ್ರಮಾಣದ ನಿದ್ರೆಯಿಂದ ಬಾಧಿತರಾಗುತ್ತಾರೆ ಎಂದು ಹೇಳುವ ಸ್ವಾಮಿ ಅವರು ದುರದೃಷ್ಟವಶಾತ್ ಪಾರ್ಕಿನ್ಸನ್ ಎಂಬುದು ಪ್ರೋಗ್ರೆಸಿವ್ ಕಾಯಿಲೆಯಾಗಿದೆ ಹಾಗೂ ಕೆಲ ವಿಶೇಷ ಆಸ್ಪತ್ರೆಗಳಲ್ಲಿ ಈ ಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಲಭ್ಯವಿರುವುದಾಗಿ ವಿವರಣೆ ನೀಡುತ್ತಾರೆ.
ಡಾ. ಪ್ರಶಾಂತ್ ಅವರ ಪ್ರಕಾರ, ಈ ವಯೋಮಾನದ ಕಾಯಿಲೆಗಳು ಅನುವಂಶಿಕತೆ ಹಾಗೂ ವಾತಾವರಣ ಅಂಶಗಳ ಮೇಲೆ ಅವಲಂಬಿತವಾಗಿದ್ದು ಇದನ್ನು ತಡೆಯಬೇಕೆಂದಿದ್ದರೆ ಒತ್ತಡ ರಹಿತ ಹಾಗೂ ಆರೋಗ್ಯಕರವಾದ ಜೀವನಶೈಲಿ ರೂಪಿಸಿಕೊಳ್ಳುವುದು ಅವಶ್ಯಕವಾಗಿದೆ. ಆದರೆ, ಪ್ರಸ್ತುತ ಕಳಪೆ ಗುಣಮಟ್ಟದ ಜೀವನಶೈಲಿ ಹಾಗೂ ಅನಾರೋಗ್ಯಕರ ಅಭ್ಯಾಸಗಳು, ಒತ್ತಡಗಳು ಹೆಚ್ಚಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲೇ ಈ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.
ಕೃಪೆ: ನ್ಯೂಸ್ 18 ಕನ್ನಡ
PublicNext
12/04/2022 09:26 am