ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆಯಾಗಿದೆ. ಅದ್ರಲ್ಲೂ ಈ ಪ್ರಕರಣ ಬೆಳಕಿಗೆ ಬಂದ ಬಳಕವೂ ಮತ್ತೋರ್ವ ಬಾಣಂತಿ ಸಾವು ಪ್ರಕರಣ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಬಾಣಂತಿಯರ ಸಾವಿನ ಬಗ್ಗೆ ಸಿಎಂ ತೀವ್ರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ ಅಲ್ದೇ ಸಚಿವರು ಮತ್ತು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಳಪೆ ಔಷಧ ಯಾಕೆ ಕೊಟ್ರಿ? ಬಾಣಂತಿಯರ ಸಾವಿನ ಪ್ರಕರಣ ಏನು ಸಾಮಾನ್ಯ ಸಂಗತಿ ನಾ? ಬಹಳ ಜಾಗುರುಕತೆಯಿಂದ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಚಾಟಿ ಬೀಸಿದ್ದಾರೆ. ಅಲ್ದೇ ಬಾಣಂತಿಯರ ಸಾವಿನ ಪ್ರಕರಣ ಬಳಿಕವೂ ಹಿರಿಯ ಅಧಿಕಾರಿಗಳು ಮತ್ತು ಸಚಿವರಗಳು ಸ್ಥಳಕ್ಕೆ ಧಾವಿಸದ ವಿರುದ್ಧದವೂ ಸಿಎಂ ಗರಂ ಆಗಿದ್ದಾರೆ. ಸಂಪುಟ ಸಭೆಯಲ್ಲಿ ಸಿಎಂ ತರಾಟೆಗೆ ತಗೆದುಕೊಂಡ ಬೆನ್ನಲ್ಲೇ ಇಂದು ಬಳ್ಳಾರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡುತ್ತಿದ್ದಾರೆ.
ಕೇವಲ ಬಳ್ಳಾರಿ ಮಾತ್ರವಲ್ಲದೆ ಬೇರೆ ಎಲ್ಲೂ ಈ ರೀತಿ ಬಾಣಂತಿಯರ ಸಾವು ಪ್ರಕರಣಗಳು ನಡೆಯಕೂಡದು ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
PublicNext
07/12/2024 09:00 am