ಕತ್ತೆ ಹಾಲು ಇತರ ಹಾಲಿಗಿಂತ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಜನಜನಿತ ಮಾತು. ಆ್ಯಂಟಿಮೈಕ್ರೊಬಿಯಲ್ ಗುಣ ಈ ಹಾಲಿನಲ್ಲಿದೆ. ಅಂದರೆ ಈ ಹಾಲು ಬೇಗ ಹಾಳಾಗುವುದಿಲ್ಲ ಎಂಬುದು ಅನೇಕರ ಮಾತು. ಯೋಗ ಗುರು ಹಾಗೂ ಪತಂಜಲಿ ಉತ್ಪನ್ನಗಳ ಪ್ರಚಾರಕ ಬಾಬಾ ರಾಮ್‌ದೇವ್ ಅವರು ಕತ್ತೆ ಹಾಲನ್ನು ತಾವೇ ಕರೆದು ಕುಡಿದಿದ್ದಾರೆ. ಈ ವಿಡಿಯೋ ಈ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಕತ್ತೆ ಹಾಲು ಕುಡಿಯುತ್ತಾ ತಾವು ಮೊದಲ ಬಾರಿಗೆ ಕತ್ತೆ ಹಾಲನ್ನು ಕುಡಿಯುತ್ತಿರುವುದಾಗಿ ಹೇಳಿದ್ದಾರೆ. ನಾನು ಒಂಟೆ, ಹಸು, ಕುರಿ ಮತ್ತು ಮೇಕೆಗಳಿಂದ ಹಾಲು ಕರೆದಿದ್ದೇನೆ. ಆದರೆ ಈ ಹಾಲು ಸೂಪರ್ ಟಾನಿಕ್ ಆಗಿದ್ದು ಸೂಪರ್ ಕಾಸ್ಮೆಟಿಕ್ ಆಗಿ ಕೆಲಸ ಮಾಡುತ್ತದೆ. ಈ ಹಾಲು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
PublicNext
04/12/2024 06:00 pm