ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ - ವಿಜಯನಗರ ಜಿಲ್ಲೆಗಳಲ್ಲಿ 358ಕ್ಕೂ ಅಧಿಕ ಶಿಶುಗಳ ಸಾವು, ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ

ಬಳ್ಳಾರಿ: ಒಂಭತ್ತು ತಿಂಗಳು ಗರ್ಭದಲ್ಲಿ ಹೊತ್ತು, ಸಾವಿರ ಕನಸೊಂದಿಗೆ ಮಗುವನ್ನ ಹೆತ್ತು ತಾಯ್ತನ ಅನುಭವಿಸಬೇಕೆಂಬುದು ಪ್ರತಿ ಹೆಣ್ಣು ಮಗಳ ಕನಸಾಗಿರುತ್ತದೆ. ಆದರೆ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ನೂರಾರು ಹಸುಗೂಸುಗಳು ಪ್ರಪಂಚ ನೋಡುವ ಮುಂಚೆಯೇ ಮಸಣ ನೋಡುವಂತಾಗಿದೆ.

ಬಳ್ಳಾರಿಯಲ್ಲಿ 293, ವಿಜಯನಗರ ಜಿಲ್ಲೆಯಲ್ಲಿ 65 ಕಂದಮ್ಮಗಳು ಸೇರಿ ಒಟ್ಟು ಎಂಟು ತಿಂಗಳಲ್ಲಿ 358 ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿದ್ದಾವೆ.

ಬಳ್ಳಾರಿಯ ಪ್ರತಿಷ್ಟಿತ ವಿಮ್ಸ್ ಆಸ್ಪತ್ರೆಯಲ್ಲಿ 290 ಕ್ಕೂ ಅಧಿಕ ಕಂದಮ್ಮಗಳು ಕಣ್ಣು ಮುಚ್ಚಿರುವುದು ಖೇದಕರ ವಿಷಯ. ಇತ್ತ ಆರೋಗ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದೆ ಸರಾಸರಿ ದಿನಕ್ಕೆ 3 ಹಸುಗೂಸುಗಳು ಸಾವನ್ನಪ್ಪುತ್ತಿವೆ ಎಂದು ಜನರು ಆಕ್ರೋಶಿತರಾಗಿದ್ದಾರೆ.

ಆಸ್ಪತ್ರೆಗಳ ಕೊರತೆಯಿಂದಲೇ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಬರುವ ಮುನ್ನವೇ ಕೂಸು ಕಣ್ಮುಚ್ಚುತ್ತಿದೆ

ಹಾಗೂ ಸರ್ಕಾರ ಹಸುಗೂಸುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಯೋಜನೆಗಳು ತಂದರು ನೋ ಯೂಸ್ ಎಂಬಂತಾಗಿದೆ.

ಒಟ್ಟಿನಲ್ಲಿ ಆಸ್ಪತ್ರೆ ಸಮಸ್ಯೆ, ಅಪೌಷ್ಟಿಕತೆ, ಕಡಿಮೆ ತೂಕ, ಪ್ರಿಮೆಚ್ಯೂರ್, ಹೆರಿಗೆ ಸಂದರ್ಭದಲ್ಲಿ ತೊಂದರೆ, ಇನ್ಪೆಕ್ಷನ್ ಸೇರಿ ಹಲವಾರು ಕಾರಣಗಳಿಂದ ಶಿಶುಗಳು ಮರಣವನ್ನಪ್ಪುತ್ತಿದ್ದಾವೆ, ಇನ್ನಾದರು ಪ್ರತಿ ತಾಲೂಕಿನಲ್ಲಿ ಸೂಕ್ತ ವ್ಯವಸ್ಥೆ ಹೊಂದಿರುವ ಹೆರಿಗೆ ಆಸ್ಪತ್ರೆ ತೆರೆದು ಕೂಸು ಸಾವನ್ನಪ್ಪುವುದನ್ನು ತಡೆಯಬೇಕು ಅನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Edited By : Shivu K
PublicNext

PublicNext

27/12/2021 01:59 pm

Cinque Terre

80.77 K

Cinque Terre

2