ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೌಚಾಲಯಕ್ಕೆ ಉಪಯೋಗಿಸೋ ನೀರನ್ನೆ 30 ವರ್ಷದಿಂದ ಕುಡಿಯಲು ಬಳಸಿದ ಜಪಾನ್ ಆಸ್ಪತ್ರೆ

ಜಪಾನ್:ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಕಳೆದ 30 ವರ್ಷದಿಂದ ಕುಡಿಯುವ ನೀರಿನ ಬದಲು,ಶೌಚಾಲಯಕ್ಕೆ ಉಪಯೋಗಿಸೋ ನೀರನ್ನೆ ರೋಗಿಗಳು ಕುಡಿಯಲು ಬಳಸಿರೋ ಆಘಾತಕಾರಿ ಘಟನೆ ಈಗ ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಹೊಸ ಕಟ್ಟಡವನ್ನ ನಿರ್ಮಿಸಿದ ಬಳಿಕವೇ ಈ ವಿಷಯ ಹೊರ ಬಿದ್ದಿದ್ದು ಇದರ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೂ ಮತ್ತು ಆಡಳಿತ ಮಂಡಳಿಗೂ ಗೊತ್ತೇ ಇಲ್ಲ ಅನ್ನೋದೇ ಈಗ ಆಶ್ಚರ್ಯದ ಸಂಗತಿಯಾಗಿದೆ.

ದುರಂತ ಅಂದ್ರೆ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ರೋಗಿಗಳು ಶೌಚಾಲಯಕ್ಕೆ ಬಳಸುವ ಇದೇ ನೀರನ್ನೆ 30 ವರ್ಷದಿಂದ ಉಪಯೋಗ ಮಾಡಿದೆ. ವಾರಕ್ಕೊಮ್ಮೆ ಆ ನೀರಿನ ರುಚಿ,ಬಣ್ಣ ಮತ್ತು ವಾಸನೆಯನ್ನ ಪರಿಶೀಲಿಸಿದೆ.ಆದರೆ,1993 ರಲ್ಲಿ ಆಸ್ಪತ್ರೆ ನಿರ್ಮಿಸುವಾಗಲೇ ಈ ಪೈಪ್ ಜೋಡಣೆಯಲ್ಲಿ ಈ ಯಡವಟ್ಟು ಆಗಿದೆ ಅಂತಲೇ ಜಪನೀಸ್ ನ್ಯೂಸ್ ಔಟ್ಲೆಟ್ ಯೊಮಿಯಂ ಶಿಂಬುನ್ ಎಂಬ ಪತ್ರಿಕೆ ವರದಿ ಮಾಡಿದೆ.

Edited By :
PublicNext

PublicNext

10/11/2021 08:15 pm

Cinque Terre

27.43 K

Cinque Terre

1