ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಭಾರಿ ಇಳಿಕೆ ಕಾಣುತ್ತಿದೆ. ವಿಶೇಷವೆಂದರೆ ಇಂದು ಐದು ಜಿಲ್ಲೆಗಳಲ್ಲಿ ಒಂದೇ ಒಂದು ಕೋವಿಡ್ ಕೇಸ್ ಪತ್ತೆಯಾಗಿಲ್ಲ. ನಿನ್ನೆ ಒಂಬತ್ತು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶೂನ್ಯವಿತ್ತು.
ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಇಂದು 357 ಜನರಿಗೆ ಕೊರೊನಾ ತಗುಲಿದೆ. ಈವರೆಗೂ 29,82,089 ಜನರಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ 0.31ಕ್ಕೆ ಕುಸಿದಿದೆ. ಇಂದು 1,12,780 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
ರಾಜ್ಯದಲ್ಲಿ ಇಂದು 438 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 29,34,523 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇಂದು ಡೆಡ್ಲಿ ಸೋಂಕಿಗೆ 10 ಜನ ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 37,916ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 9,621 ಸಕ್ರಿಯ ಪ್ರಕರಣಗಳಿವೆ. ಇನ್ನು ಮರಣ ಪ್ರಮಾಣ 2.80ನಷ್ಟಿದೆ.
ಬೆಂಗಳೂರು: ನಗರದಲ್ಲಿ ಇಂದು 140 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12,48,744ಕ್ಕೆ ಏರಿಕೆಯಾಗಿದೆ 157 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 12,25,967ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿಂದು ಹೆಮ್ಮಾರಿ ಸೋಂಕಿಗೆ ಐವರು ಸಾವನ್ನಪ್ಪಿದ್ದು, ಈವೆರಗೂ ಒಟ್ಟು 16,203 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ 6,573 ಸಕ್ರಿಯ ಪ್ರಕರಣಗಳಿವೆ.
PublicNext
13/10/2021 06:12 pm