ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಮಂಜು ಶ್ರೀ ನರ್ಸಿಂಗ್ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆರೋಗ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಅಲ್ಲದೇ ಶಾಲೆ ಆರಂಭಕ್ಕೆ ಸಹ ತಜ್ಞರು ಹಿಂದೇಟು ಹಾಕಿದ್ದಾರೆ.
ಬೆಂಗಳೂರಿಗೆ ಕೇರಳ ಶಾಕ್ ಎದುರಾಗಿದ್ದು, ಈಗಾಗಲೇ ಮಂಜುಶ್ರೀ ನರ್ಸಿಂಗ್ ಕಾಲೇಜ್ ನ ಕೇರಳ ವಿದ್ಯಾರ್ಥಿಗಳಲ್ಲಿ 40 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ ಸಂಪರ್ಕಿತರು ಒಟ್ಟು 200 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೇರಳ ಕೊರೊನಾ ಶಾಕ್ ನಿಂದಾಗಿ ಬಿಬಿಎಂಪಿ ಹೊಸ ರೂಲ್ಸ್ ಮಾಡಿದೆ. ಕೇರಳದ ಭರ್ಜರಿ ಶಾಕ್ ಗೆ ಬಿಬಿಎಂಪಿ ಥಂಡಾ ಹೊಡೆದಿದ್ದು, ಈಗ ಕೇರಳ ಗಡಿ ಬಂದ್ ಮಾಡಲು ಸಾಧ್ಯವಿಲ್ಲ ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿದೆ.
PublicNext
16/02/2021 12:52 pm