ಮೈಸೂರು: ಕೊರೊನಾ ವಾರಿಯರ್ಸ್‌ಗೆ ಧೈರ್ಯ ತುಂಬುವ ಸಲುವಾಗಿ ಇಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು, ''ಯಾವುದೇ ಆತಂಕವಿಲ್ಲದೇ ವ್ಯಾಕ್ಸಿನ್ ಪಡೆದಿದ್ದೇನೆ. ವ್ಯಾಕ್ಸಿನೇಷನ್ ಆದ ನಂತರ ಅರ್ಧಗಂಟೆ ಅಬ್ಸರ್ವೇಷನ್ನಲ್ಲಿದ್ದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಹಾಗಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಲಸಿಕೆ ಪಡೆದುಕೊಳ್ಳಿ. ಈಗಾಗಲೇ ಜಿಲ್ಲೆಯಲ್ಲಿ ಶೇ 60 ಪರ್ಸೆಂಟ್ ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಸದ್ಯದಲ್ಲೇ ಶೇ 100 ಲಸಿಕೆ ಅಭಿಯಾನ ಪೂರ್ಣಗೊಳ್ಳಲಿದೆ. ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಹಂತ ಹಂತವಾಗಿ ಹಿರಿಯರಿಗೆ, ಜನಸಾಮಾನ್ಯರಿಗೆ ಲಸಿಕೆ ನೀಡುವ ಕಾರ್ಯ ನಡೆಯಲಿದೆ'' ಎಂದು ತಿಳಿಸಿದ್ದಾರೆ.
PublicNext
08/02/2021 06:45 pm