ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾಗೆ ಮದ್ದು ಲಭಿಸಿದೆ. ಸಧ್ಯ ಈ ಲಸಿಕೆ ಹಂಚಿಕೆಗೆ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ.
ಅದಕ್ಕಾಗಿ ದಿನಗಣನೆ ಶುರುವಾಗಿದೆ. ಲಸಿಕೆ ವಿತರಣೆ ವ್ಯವಸ್ಥೆ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಷ್ಟ ದಿಕ್ಪಾಲಕರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ತಿಂಗಳಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿವೆ. ಲಸಿಕೆ ವಿತರಣೆ, ನಿರ್ವಹಣೆ ಹೇಗಿರಬೇಕು, ಹೇಗಿರಬಾರದೆಂದು ಸಿಎಂ ಸೂಚನೆ ನೀಡಿದ್ದಾರೆ.
ಸಿಎಂ ‘ವ್ಯಾಕ್ಸಿನ್ ವಾರ್ನಿಂಗ್’ ಏನು..?
ಲಸಿಕೆ ವಿತರಣೆಯಲ್ಲಿ ರಾಜಕೀಯ ಸಲ್ಲದು. ಲಸಿಕೆ ಹಂಚಿಕೆ, ನಿರ್ವಹಣೆ ಪ್ರಕ್ರಿಯೆಯಲ್ಲಿ ಎಡವಟ್ಟಾಗಬಾರದು. ಹಂತ ಹಂತವಾಗಿ ನಿಗದಿಪಡಿಸಿದ ವರ್ಗಗಳಿಗೆ ಲಸಿಕೆ ವಿತರಣೆ ನಡೆಯಬೇಕು.
ಡಿಸಿಗಳು, ಡಿಎಚ್ ಒಗಳ ಜೊತೆ ಸಮನ್ವಯತೆ ಕಾಪಾಡಿಕೊಂಡು ವಿತರಿಸಿ ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಗಮನ ಕೊಡಬೇಕು. ಬೆಂಗಳೂರು ನಗರದ 1.65 ಲಕ್ಷ ಹೆಲ್ತ್ ವರ್ಕರ್ಸ್ ಗೆ ಮೊದಲ ಆದ್ಯತೆ ನೀಡಿ.
ಲಸಿಕೆ ಕೇಂದ್ರ, ಶೇಖರಣೆ ಕೇಂದ್ರಗಳ ಮೇಲೆ ತೀವ್ರ ನಿಗಾ ಇರಿಸಿ. ವ್ಯಾಕ್ಸಿನೇಷನ್ ಪ್ರಕ್ರಿಯೆಗೂ ಮುನ್ನ ಕ್ಷೇತ್ರವಾರು ಫಲಾನುಭವಿಗಳ ಲಿಸ್ಟ್ ರೆಡಿ ಇರಲಿ.
ವ್ಯಾಕ್ಸಿನೇಷನ್ ಸಿದ್ಧತೆಯಲ್ಲಿ ಏನೇ ಸಮಸ್ಯೆ, ತೊಡಕು ಎದುರಾದ್ರೂ ಕೂಡಲೇ ಗಮನಕ್ಕೆ ತನ್ನಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
PublicNext
04/01/2021 01:25 pm