ಚೆನ್ನೈ: ಕೋವಿಡ್ ಅಟ್ಟಹಾಸ ಶುರುವಾದಂತಿದೆ. ದಿನೇ ದಿನೇ ಎಲ್ಲೆಡೆ ಕೇಸ್ ಹೆಚ್ಚಾಗುತ್ತಿವೆ. ಮದ್ರಾಸ್‌ನ IIT ಯಲ್ಲಿ ಈಗ ಮತ್ತೆ 18 ಕೇಸ್ ಪತ್ತೆ ಆಗಿವೆ.
ನಿನ್ನೆಯ ದಿನ ಗುರುವಾರ ಇಲ್ಲಿ 12 ಕೋವಿಡ್ ಕೇಸ್ ಪತ್ತೆ ಆಗಿದ್ದವು. ಇಂದು ಶುಕ್ರವಾರ ಬರೋಬ್ಬರಿ 18 ಕೇಸ್ ಪತ್ತೆ ಆಗಿವೆ. ಅಲ್ಲಿಗೆ ಕೋವಿಡ್ ನಾಲ್ಕನೆ ಅಲೆ ಭೀತಿ ಹೆಚ್ಚಾದಂತೆ ಆಗಿದೆ.
ಸೋಂಕು ತಗುಲಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಕ್ಯಾಂಪಸ್‌ಗೂ ಭೇಟಿ ನೀಡಿದ್ದಾರೆ.ಕ್ಯಾಂಪಸ್ ಆಡಳಿತ ಮಂಡಳಿ ಜೊತೆಗೂ ಚರ್ಚೆ ಮಾಡಿದ್ದಾರೆ.
ಏಪ್ರಿಲ್-20 ಕೋವಿಡ್ ಬುಲಿಟಿನ್ ಪ್ರಕಾರ ತಮಿಳುನಾಡಿನಲ್ಲಿ 39 ಹೊಸ ಕೋವಿಡ್ ಕೇಸ್ ಪತ್ತೆ ಆಗಿದ್ದವು. ಸದ್ಯ ಇಲ್ಲಿ ಒಟ್ಟು 34,53,390 ಕೋವಿಡ್ ಏರಿಕೆ ಆಗಿದೆ.
PublicNext
22/04/2022 03:44 pm