ಬೆಂಗಳೂರು:ರಾಜ್ಯದಲ್ಲಿ ಕೇವಲ ಎರಡೇ ಎರಡು ಒಮಿಕ್ರಾನ್ ಕೇಸ್ ಪತ್ತೆ ಆಗಿದ್ದವು. ಇನ್ನೇನು ಸೋಂಕಿತ ಬಿಡುಗಡೆ ಆಗಬೇಕು ಅನ್ನೋ ಹೊತ್ತಿಗೆ ಒಮಿಕ್ರಾನ್ ಮತ್ತೊಂದು ಕೇಸ್ ಪತ್ತೆ ಆಗಿದೆ. ಈ ಮೂಲಕ ಕರ್ನಾಟಕದ ಒಮಿಕ್ರಾನ್ ಕೇಸ್ 3ಕ್ಕೆ ಏರಿದಂತಾಗಿದೆ.
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 34 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ಇರೋದು ಪತ್ತೆ ಆಗಿದೆ. ಸೋಂಕಿತ ವ್ಯಕ್ತಿ ಬೊಮ್ಮನಹಳ್ಳಿಯ ಅಂಜನಾಪುರದ ನಿವಾಸಿ ಆಗಿದ್ದಾನೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ ಒಮಿಕ್ರಾನ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ ಐದು ಜನ ಇದ್ದರು. ದ್ವಿತೀಯ ಸಂಪರ್ಕದಲ್ಲಿ 15 ಮಂದಿ ಇದ್ದರು. ಇವರ ಮಾದರಿಗಳನ್ನೂ ಈಗಾಗಲೇ ಕೋವಿಡ್ ಪರೀಕ್ಷೆಗೆ ಕಳಿಸಲಾಗಿದೆ.
PublicNext
12/12/2021 02:43 pm